ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಜೀವನಾಧಾರಿತ ‘ಸರ್ವೈವರ್’ ಸಾಕ್ಷ್ಯಚಿತ್ರದ ಟೀಸರ್ ಇಂದು (ಜ.26) 10 ಗಂಟೆಗೆ ಬಿಡುಗಡೆಯಾಗಿದೆ. ಈ ಕುರಿತು ನಟ ಶಿವಣ್ಣ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.
.40 ವರ್ಷಗಳ ಸಿನಿ ಪಯಣದ ಸಂಭ್ರಮ: ವೇದಿಕೆ ಮೇಲೆ ಕಣ್ಣೀರಿಟ್ಟ ಶಿವಣ್ಣ.ಬಿಗ್ಬಾಸ್–12ರ ಗೆಲುವಿನ ಸಂಭ್ರಮ: ಶಿವಣ್ಣ, ಕಿಚ್ಚ ಸುದೀಪ್ ಮನೆಗೆ ಗಿಲ್ಲಿ ಭೇಟಿ.
ಇತ್ತೀಚೆಗೆ ಶಿವರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಪ್ರವೇಶಿಸಿ 40 ವರ್ಷಗಳು ಭರ್ತಿಯಾಗಿತ್ತು. ಆ ಕ್ಷಣವನ್ನು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಇಡೀ ತಂಡ ಭರ್ಜರಿಯಾಗಿ ಸಂಭ್ರಮಿಸಿತ್ತು. ಆ ಬೆನ್ನಲ್ಲೆ ಶಿವಣ್ಣ ಜೀವನಾಧಾರಿತ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅದರಲ್ಲಿ ನಟ ಶಿವಣ್ಣ ಅವರ ಇಡೀ ಜೀವನ ಹೇಗಿತ್ತು? ಅವರು ಬೆಳೆದು ಬಂದ ಹಾದಿ, ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅದರಿಂದ ಶಿವಣ್ಣ ಚೇತರಿಸಿಕೊಂಡಿದ್ದು ಹೇಗೆ ಎಂಬೆಲ್ಲ ಅಂಶಗಳನ್ನು ಸಾಕ್ಷ್ಯಚಿತ್ರದಲ್ಲಿ ಕಾಣಬಹುದು. ಸದ್ಯ ಸರ್ವೈವರ್ ಸಾಕ್ಷ್ಯಚಿತ್ರ ಟೀಸರ್ ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಶಿವರಾಜ್ ಕುಮಾರ್ ಅವರೇ ಇನ್ನಷ್ಟು ಮಾಹಿತಿ ನೀಡಬೇಕಿದೆ.

ಟೀಸರ್ ಬಿಡುಗಡೆ ಮಾಡಿರುವ ಶಿವರಾಜ್ ಕುಮಾರ್, ಅನಾರೋಗ್ಯದ ಕುರಿತು ಬರೆದುಕೊಂಡಿದ್ದಾರೆ. ಚಿಕಿತ್ಸೆ ಸಲುವಾಗಿ ಅಮೆರಿಕಕ್ಕೆ ಹೋಗುವಾಗ ನಿಮ್ಮ ಹಾರೈಕೆಗಳನ್ನು ಹೊತ್ತು, ಅಲ್ಲಿದಾಗ ನಿಮ್ಮ ಪ್ರಾರ್ಥನೆಗಳನ್ನು ನೆನೆದು, ಮರಳಿ ಬಂದಾಗ ನಿಮ್ಮ ನಗುವಿನಲ್ಲಿ ಮೆರೆದು, ನಿಮ್ಮೆಲ್ಲರೊಂದಿಗೆ ನಾನು ಕೂಡ ಗೆದ್ದು ಬಂದು ಹೇಳಲು ಮುಂದಾಗಿರುವ ಕಥೆ. ಗುಣಮುಖನಾಗಿ ನಿಮ್ಮೆಲರ ಬಳಿ ಮರಳಿಬಂದ ದಿನಕ್ಕೆ ಒಂದು ವರುಷ. ನಿಮ್ಮ ಪ್ರೀತಿ ಹಾರೈಕೆಗೆ ನಾನು ಸದಾ ಋಣಿ. ಸರ್ವೈವರ್ ಡಾಕ್ಯುಮೆಂಟರಿಯ ಒಂದು ಸಣ್ಣ ತುಣುಕು ನಿಮ್ಮ ಮುಂದೆ. ನೋಡಿ, ಹರಸಿ, ಹಾರೈಸಿ ಎಂದು ಕೋರಿದ್ದಾರೆ.

ಪ್ರದೀಪ್ ಶಾಸ್ತ್ರಿ ಅವರು ಶಿವರಾಜ್ ಕುಮಾರ್ ಅವರ ಜೀವನದ ಸಂಕಷ್ಟದ ಪ್ರಯಾಣವನ್ನು ಆಧರಿಸಿದ ‘ಸರ್ವೈವರ್’ ಸಾಕ್ಷ್ಯ ಚಿತ್ರದ ನಿರ್ದೇಶಕರಾಗಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ನಡಿ ಸಾಕ್ಷ್ಯ ಚಿತ್ರದವನ್ನು ನಿರ್ಮಿಸಲಾಗುತ್ತಿದ್ದು, ಗೀತಾ ಶಿವರಾಜ್ ಕುಮಾರ್ ಅವರು ಹಾಗೂ ದರ್ಶನ್ ಮತ್ತು ಚಿನ್ಮಯ್ ಸಾಕ್ಷ್ಯ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ,