ಬೆಂಗಳೂರು: ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಬೇಡಿಕೆ ನಟಿಯಾಗಿ ಬೆಳೆದಿರುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ರಕುಲ್ ಪ್ರೀತ್ ಸಿಂಗ್ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ.

ಹಿಂದಿಯ ಖಾಸಗಿ ಸುದ್ದಿ ವಾಹಿನಿಯ ಜೊತೆ ಮಾತನಾಡಿರುವ ಅವರು ಪ್ರೀತಿ ಅಂದ್ರೆ ತುಂಬಾ ಇಷ್ಟ, ಆದರೆ ಮದುವೆ ಆದ್ರೆ ಬೋರಿಂಗ್ ಎಂದು ನಗುತ್ತಲೇ ಹೇಳಿದ್ದಾರೆ. ರಕುಲ್ ಅವರ ಈ ಮಾತು ಅಭಿಮಾನಿಗಳಿಗೆ ಇಷ್ಟವಾಗಿಲ್ಲವಂತೆ!

ರಕುಲ್ ಮದುವೆಯಾಗಬೇಕು ಎಂಬುದು ಅಭಿಮಾನಿಗಳ ಒತ್ತಾಸೆಯಾಗಿತ್ತು. ತನ್ನ ಇನಿಯನ ಹೆಸರನ್ನು ಬಹಿರಂಗಪಡಿಸಿದಾಗ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಪಟ್ಟಿದ್ದರು.

ಮದುವೆ ಬೋರಿಂಗ್ ಎಂದು ರಕುಲ್ ತಮಾಷೆಗೆ ಹೇಳಿರಬೇಕು ಎಂದು ಬಹಳಷ್ಟು ಅಭಿಮಾನಿಗಳು ಹೇಳಿದ್ದಾರೆ. ಆದರೂ ಕೆಲ ಅಭಿಮಾನಿಗಳು ಆ ಮಾತಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಟ ಹಾಗೂ ನಿರ್ಮಾಪಕ ಜಕ್ಕಿ ಬಗ್ನಾನಿ ಅವರೇ ರಕುಲ್ ಅವರ ಹುಡುಗ. ಪಾರ್ಕ್ನಲ್ಲಿ ರಕುಲ್ ಹಾಗೂ ಜಕ್ಕಿ ಕೈ ಕೈ ಹಿಡಿದುಕೊಂಡು ಹೋಗುತ್ತಿರುವ ಫೋಟೊ ಹಂಚಿಕೊಂಡು, ತಮ್ಮ ಸಂಬಂಧವನ್ನುಈ ಹಿಂದೆ ಖಚಿತಪಡಿಸಿದ್ದಾರೆ.

ಕೋಲ್ಕತ್ತ ಮೂಲದ 36 ವರ್ಷದ ಜಕ್ಕಿ ಬಗ್ನಾನಿ ಬಾಲಿವುಡ್ ನಟ ಹಾಗೂ ನಿರ್ಮಾಪಕ. 2001 ರಲ್ಲಿ ‘ರೆಹನಾ ಹೈ ತೆರೆ ದಿಲ್ ಮೇನ್’ ಸಿನಿಮಾ ಮೂಲಕ ಚಿತ್ರರಂಗ ಪಾದಾರ್ಪಣೆ ಮಾಡಿದ್ದಾರೆ.

‘ಫಾಲ್ತು’, ‘ಅಜಬ್ ಗಜಬ್’, ‘ಮೋಹಿನಿ’, ‘ವೆಲ್ ಕಮ್ ಟು ಕರಾಚಿ’, ‘ರಂಗ್ರೇಜ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ‘ಕೂಲಿ ನಂ 1’, ‘ವೆಲ್ ಕಮ್ ಟು ನ್ಯೂಯಾರ್ಕ್’, ‘ಬೆಲ್ ಬಾಟಮ್’ ಸೇರಿ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.