ಗುರುವಾರ , ಸೆಪ್ಟೆಂಬರ್ 23, 2021
27 °C

ಚಿತ್ರೀಕರಣ ಪೂರ್ಣಗೊಳಿಸಿದ 'ನೈಟ್ಮೇರ್'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಮಿಡಿ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾಹಂದರದ ‘ನೈಟ್ಮೇರ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಚಿತ್ರತಂಡ ಕೈಗೆತ್ತಿಕೊಂಡಿದೆ.

ನವೀನ್ ನಾಯಕ ಮತ್ತು ಕಿತ್ತಾನೆ ಗೋಪಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ನವೀನ್ ನಾಯಕ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ ಅಂಚಲ್ ರಾಜ್ ಅಭಿನಯಿಸಿದ್ದಾರೆ.

ಕಂಟೆಂಟ್‌ ಪ್ರಧಾನವಾದ ಚಿತ್ರಗಳನ್ನು ಕನ್ನಡ ಸಿನಿಪ್ರಿಯರು ಎಂದಿಗೂ ಕೈಬಿಡುವುದಿಲ್ಲ. ಈ ಚಿತ್ರದಲ್ಲಿ ಒಳ್ಳೆಯ ಕಂಟೆಂಟ್‌ ಇದೆ. ಹಾಸ್ಯವೂ ಹದವಾಗಿ ಬೆರೆಸಲಾಗಿದೆ. ಪ್ರೇಕ್ಷಕನ ಕುತೂಹಲ ಕೆರಳಿಸುವಂತಹ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಅಂಶಗಳನ್ನೂ ಕಥೆಗೆ ಪೂರಕವಾಗಿ ಸೇರಿಸಿದ್ದೇವೆ. ನಮ್ಮ ಚಿತ್ರ ಸಿನಿಪ್ರಿಯರ ಮನಸು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ಮತ್ತು ನಾಯಕ ನಟ ನವೀನ್ ನಾಯಕ.

ಬೆಂಗಳೂರು ಸುತ್ತಮುತ್ತ ಕಳೆದ ಜನವರಿಯಿಂದಲೇ ಶೂಟಿಂಗ್‌ ನಡೆಸಲಾಗಿತ್ತು. ಕೊರೊನಾ ಲಾಕ್‌ಡೌನ್‌ ಪೂರ್ವದಲ್ಲೇ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದಿತ್ತು. ಬಾಕಿ ಉಳಿದಿದ್ದ ಸಣ್ಣಪುಟ್ಟ ಭಾಗವನ್ನು ಇತ್ತೀಚೆಗಷ್ಟೇ ಪೂರ್ಣಗೊಳಿಸಲಾಯಿತು ಎನ್ನುತ್ತಾರೆ ಅವರು.

ಸೌನವಿ ಕ್ರಿಯೇಷನ್ಸ್ ಅಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೆ.ಆರ್. ಸೌಜನ್ಯ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಹರಿಕೃಷ್ಣ, ನಿರ್ದೇಶನ ಸುಬ್ರಮಣ್ಯ ಆಚಾರ್ಯ, ಸಂಕಲನ ಪವನ್ ಗೌಡ ಅವರದು.

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಅಪ್ಪಣ್ಣ ರಾಮದುರ್ಗ, ‘ಕಿರಿಕ್ ಪಾರ್ಟಿ’ ಖ್ಯಾತಿಯ ರಾಘು ರಾಮನ ಕೊಪ್ಪ, ಯಶೋಧರ, ಚೇತನ್, ಮಹೇಶ್, ಅಕ್ಷಯ್ ಅವರ ತಾರಾಗಣವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು