ಭಾನುವಾರ, ಮೇ 16, 2021
22 °C

ರಣಬೀರ್‌ ಸಿನಿಮಾದಲ್ಲಿ ನಟಿಸಲು ಶ್ರದ್ಧಾ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಾ ಹೊ’ ಹಾಗೂ ‘ಚಿಚೊರೆ’ ಸಿನಿಮಾಗಳಲ್ಲಿ ನಟಿಸಿದ ಬಳಿಕ ಶ್ರದ್ಧಾ ಕಪೂರ್‌ಗೆ ಮೇಲಿಂದ ಮೇಲೆ ಅವಕಾಶಗಳು ಬರುತ್ತಿವೆಯಂತೆ. ಯಾವ ಸಿನಿಮಾ ಆಯ್ಕೆಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ಇದ್ದಾರಂತೆ.

ಶ್ರದ್ಧಾ ಅಭಿನಯಿಸಿದ್ದ ಎರಡು ಸಿನಿಮಾಗಳು ಈ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿವೆ. ಶ್ರದ್ಧಾಗೆ ನಿತೇಶ್‌ ತಿವಾರಿ ನಿರ್ದೇಶನದ ‘ರಾಮಾಯಣ್‌’ ಹಾಗೂ ರಣಬೀರ್‌ ಕಪೂರ್‌ ಮತ್ತು ಅಜಯ್‌ ದೇವಗನ್‌ ಅಭಿನಯದ ಹೆಸರಿಡದ ಸಿನಿಮಾ..ಈ ಎರಡು ಅವಕಾಶಗಳು ಬಂದಿದ್ದವು. ಆದರೆ ಶ್ರದ್ಧಾ, ರಣಬೀರ್‌ ಅಭಿನಯಿಸಲಿರುವ ಸಿನಿಮಾವನ್ನು ನಿರಾಕರಿಸಿದ್ದಾರೆ ಎಂಬ ಸುದ್ದಿ ಈಗ ಬಿ–ಟೌನ್‌ನಲ್ಲಿ ಸದ್ದು ಮಾಡುತ್ತಿದೆ.

‘ರಾಮಾಯಣ್‌’ ಸಿನಿಮಾದಲ್ಲಿ ಶ್ರದ್ಧಾ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣಬೀರ್‌ ಹಾಗೂ ಅಜಯ್‌ ಅಭಿನಯದ ಸಿನಿಮಾವನ್ನು ಲವ್‌ ರಂಜನ್‌ ನಿರ್ದೇಶಿಸಲಿರುವುದು ವಿಶೇಷ.

ನಿತೇಶ್ ತಿವಾರಿ ಅವರ ಸಿನಿಮಾ ₹600 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲದೇ ಐತಿಹಾಸಿಕ ಪಾತ್ರದಲ್ಲಿ ಅಭಿನಯಿಸುವ ಶ್ರದ್ಧಾ ಕನಸು ನನಸಾಗುತ್ತಿದೆ ಎಂಬ ಕಾರಣಕ್ಕೆ ಅವರು ಈ ಪಾತ್ರ ಒಪ್ಪಿಕೊಂಡಿದ್ದಾರೆ ಎಂಬುದು ಬಿ–ಟೌನ್‌ ಮಾತು.

‘ಚಿಚೊರೆ’ ಸಿನಿಮಾವನ್ನು ಕೂಡ ನಿತೇಶ್ ಅವರೇ ನಿರ್ದೇಶಿಸಿದ್ದರು. ಈ ಸಿನಿಮಾದ ಶೂಟಿಂಗ್‌ ವೇಳೆಯೇ ಅವರಿಗೆ ಈ ಆಫರ್ ಬಂದಿತ್ತು. ನಂತರ ರಣಬೀರ್ ಅಭಿನಯದ ಸಿನಿಮಾ ಬಗ್ಗೆ ಚರ್ಚೆಯಾಗಿತ್ತು. ಡೇಟ್ ಹೊಂದಾಣಿಕೆ ಆಗದ ಕಾರಣ ಬಿಟ್ಟಿದ್ದಾರೆ ಎಂದು ಶ್ರದ್ಧಾ ಆಪ್ತರೊಬ್ಬರು ಮಾಹಿತಿ ನೀಡಿದ್ದಾರಂತೆ.

ಇದನ್ನೂ ಓದಿ...ಸಾಹೋ ಪೋಸ್ಟರ್‌ ನಕಲೇ?

ಶ್ರದ್ಧಾ ನಟಿಸುತ್ತಿರುವ ‘ಸ್ಟ್ರೀಟ್ ಡಾನ್ಸರ್‌ ತ್ರಿಡಿ’ ಸಿನಿಮಾ ಈಗಾಗಲೇ ಮುಕ್ತಾಯದ ಹಂತದಲ್ಲಿದೆ. ವರುಣ್‌ ಧವನ್‌ ಅವರೊಂದಿಗೆ ನಟಿಸಿದ್ದಾರೆ. ರೆಮೊ ಡಿಸೋಜಾ ಅವರ ನಿರ್ದೇಶನ ಇದೆ. ಪ್ರಭು ದೇವ್‌, ನೋರಾ ಫತೇ ಕೂಡ ಅಭಿನಯಿಸಿದ್ದಾರೆ. ಜನವರಿ 24ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು