ಶುಕ್ರವಾರ, ಅಕ್ಟೋಬರ್ 22, 2021
29 °C

ತಾಯಿಯಾದ ನಟಿ ಶ್ರೇಯಾ ಶರಣ್: ವರ್ಷದ ಬಳಿಕ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟಿ ಶ್ರೇಯಾ ಶರಣ್ ತಾಯಿಯಾಗಿದ್ದಾರೆ. ಕಳೆದ ವರ್ಷವೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 2020ರ ಲಾಕ್‌ಡೌನ್ ಸಂದರ್ಭದಲ್ಲಿ ನಾನು, ನನ್ನ ಪತಿ ಆಂಡ್ರೇ ಕೊಶ್ಚೀವ್ ನಮ್ಮ ಮೊದಲ ಮಗುವನ್ನು ಬರಮಾಡಿಕೊಂಡೆವು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ತಡವಾಗಿ ಹಂಚಿಕೊಂಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ. 2020ರಲ್ಲಿ ನಾವು ಸುಂದರ ಕ್ಯಾರಂಟೈನ್ ಅನುಭವಿಸಿದೆವು. ಇಡೀ ಪ್ರಪಂಚವು ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವಾಗ, ನಮ್ಮ ಪ್ರಪಂಚವು ಶಾಶ್ವತವಾಗಿ ಬದಲಾಯಿತು .... ಜಗತ್ತು ಹಲವು ಸಾಹಸ ಮಾಡುತ್ತಿದ್ದಾಗ ನಮ್ಮ ಜಗತ್ತಿಗೆ ಒಂದು ದೇವತೆಯ ಆಗಮನವಾಯಿತು. ಇದಕ್ಕಾಗಿ, ನಾವು ದೇವರಿಗೆ ತುಂಬಾ ಕೃತಜ್ಞರಾಗಿರುತ್ತೇವೆ! ’ಎಂದು ಬರೆದುಕೊಂಡಿದ್ದಾರೆ.

ತಾಯಿಯಾ ಸುದ್ದಿ ಘೋಷಣೆ ಮಾಡಲು ಶ್ರೇಯಾ ಶರಣ್ ಒಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮತ್ತು ಪತಿ ಆಂಡ್ರೇ ಕೊಶ್ಚೀವ್ ಅವರ ಹೆಣ್ಣು ಮಗುವಿನೊಂದಿಗೆ ಆಟವಾಡುತ್ತಿರುವುದನ್ನು ಕಾಣಬಹುದು. ತಾವು ಗರ್ಭಿಣಿಯಾಗಿದ್ದ ಸಂದರ್ಭದ ಚಿತ್ರದ ತುಣುಕುಗಳನ್ನು ಹಂಚಿಕೊಳ್ಳುತ್ತಾ, ಶ್ರೇಯಾ ತಾವು ಗರ್ಭ ಧರಿಸಿದ ವರ್ಷವನ್ನು 2020 ಎಂದು ಬರೆದುಕೊಂಡಿದ್ದಾರೆ.

ಲಾಕ್‌ ಡೌನ್ ಸಂದರ್ಭ ಬಾರ್ಸಿಲೋನಾದಲ್ಲಿ ವಾಸಿಸುತ್ತಿದ್ದ ಶ್ರೇಯಾ ಶರಣ್ ಮತ್ತು ಆಂಡ್ರೇ ಕೊಶ್ಚೀವ್, ಅಲ್ಲಿಯೇ ಲಾಕ್‌ಡೌನ್‌ನಲ್ಲಿ ಮಗುವನ್ನು ಪಡೆದಿದ್ದಾರೆ. ಈ ವರ್ಷದ ಜೂನ್‌ನಲ್ಲಿ ದಂಪತಿ ಮುಂಬೈಗೆ ಸ್ಥಳಾಂತರಗೊಂಡರು. ರಷ್ಯಾದ ಟೆನಿಸ್ ಆಟಗಾರ, ಉದ್ಯಮಿ ಆಂಡ್ರೇ ಕೊಶ್ಚೀವ್ ಮತ್ತು ಶ್ರೀಯಾ ಸರನ್ ಮಾರ್ಚ್ 12, 2018 ರಂದು ಮುಂಬೈನಲ್ಲಿ ವಿವಾಹವಾಗಿದ್ದರು. 

ತೆಲುಗಿನ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿಯವರ ‘ಆರ್ ಆರ್ ಆರ್‌’ ಸಿನಿಮಾದಲ್ಲಿ ಶ್ರೇಯಾ ಶರಣ್ ಕಾಣಿಸಿಕೊಳ್ಳುತ್ತಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು