ಶುಕ್ರವಾರ, ಮೇ 20, 2022
26 °C

36ನೇ ವಸಂತಕ್ಕೆ ಕಾಲಿಟ್ಟ ಶ್ರುತಿ ಹಾಸನ್‌: ಸಲಾರ್‌ ಚಿತ್ರದ ಫಸ್ಟ್ ಲುಕ್‌ ಬಿಡುಗಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟಿ ಶ್ರುತಿ ಹಾಸನ್‌ ಅವರು ಇಂದು (ಶುಕ್ರವಾರ) 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶ್ರುತಿ ಹಾಸನ್‌ ಅಭಿನಯದ ‘ಸಲಾರ್‌’ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾ ‘ಕೆಜಿಎಫ್‌’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ.

‘ಸೌಂದರ್ಯ ಮತ್ತು ಸೊಬಗನ್ನು ಯಾವಾಗಲೂ ಉನ್ನತಮಟ್ಟದಲ್ಲಿ ತೋರ್ಪಡಿಸುವ ಪ್ರತಿಭಾವಂತ ನಟಿ ‘ಆದ್ಯ’ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಲಾಗಿದೆ. ಅಲ್ಲದೇ ಶ್ರುತಿ ಹಾಸನ್ ಅವರು ಸಲಾರ್​ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್​ ಒಂದನ್ನು ಟ್ವೀಟ್ ಮಾಡಲಾಗಿದೆ.

‘ಶ್ರುತಿ ಹಾಸನ್‌ ಹುಟ್ಟುಹಬ್ಬಕ್ಕೆ ಶುಭಾಶಯಯಗಳು. ನಮ್ಮ ಸೆಟ್​ಗೆ ಮತ್ತಷ್ಟು ರಂಗನ್ನು ತಂದಿದ್ದಕ್ಕೆ ತಮಗೆ ಧನ್ಯವಾದಗಳು’ ಎಂದು ಪ್ರಶಾಂತ್ ನೀಲ್ ಟ್ವೀಟ್‌ ಮಾಡಿದ್ದಾರೆ.

ಕುರ್ತಾ ಧರಿಸಿ ಮಿಂಚಿರುವ ಶ್ರುತಿ ಹಾಸನ್​ ಅವರ ‘ಸಲಾರ್’ ಲುಕ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ.

ಪ್ಯಾನ್‌ ಇಂಡಿಯಾ ಸಿನಿಮಾ ಎಂದೇ ಬಿಂಬಿತವಾಗಿರುವ ಈ ಚಿತ್ರದಲ್ಲಿ ನಟ ಪ್ರಭಾಸ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹೊಂಬಾಳೆ ಫಿಲಂಸ್ ಬ್ಯಾನರ್‌ನ ವಿಜಯ್ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಶುಭ ಕೋರಿರುವ ಪ್ರಭಾಸ್‌, ‘ನನ್ನ ಮನರಂಜಿಸುವ ನಾಯಕಿ, ಸೆಟ್‌ಗೆ ಮತ್ತಷ್ಟು ಖುಷಿ ತಂದ ಶ್ರುತಿ ಹಾಸನ್‌ ಅವರಿಗೆ ಜನ್ಮದಿನದ ಶುಭಾಶಯಗಳು! #ಸಲಾರ್’ ಬರೆದುಕೊಂಡಿದ್ದಾರೆ.  
 
ಸಲಾರ್ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾರ್ಚ್‌ 14ರಂದು ಚಿತ್ರ ತೆರೆ ಕಾಣಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು