ಸೋಮವಾರ, ಜನವರಿ 20, 2020
19 °C

ತೆಲುಗು ರಿಮೇಕ್‌ನಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಮರ್‌ಜವಾ’ ಸಿನಿಮಾ ಬಳಿಕ ನಟ ಸಿದ್ಧಾರ್ಥ್‌ ಮಲ್ಹೋತ್ರಾ ತೆಲುಗಿನ ಹಿಟ್‌ ಸಿನಿಮಾವೊಂದರ ಹಿಂದಿ ರಿಮೇಕ್‌ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಭೂಷಣ್‌ ಕುಮಾರ್‌ ನಿರ್ಮಾಣ ಮಾಡಲಿದ್ದಾರೆ. ವಿಶೇಷವೆಂದರೆ ‘ಮರ್‌ಜವಾ’ ಚಿತ್ರ ನಿರ್ದೇಶಿಸಿದ ಮಿಲಾಪ್‌ ಜವೇರಿ ಅವರೇ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

‘ಮರ್‌ಜವಾ’ ಚಿತ್ರವು ಸಿದ್ಧಾರ್ಥ್‌ ಮಲ್ಹೋತ್ರಾಗೆ ಆ್ಯಕ್ಷನ್‌ ಹೀರೋ ಎಂಬ ಬಿರುದು ತಂದುಕೊಟ್ಟಿದೆ. ಈಗ ಹೊಸ ಚಿತ್ರಕ್ಕೆ ಸಿದ್ಧಾರ್ಥ್‌ ಹಾಗೂ ತಂಡ ಕೆಲಸ ಮಾಡುತ್ತಿದೆ. ಈಗಾಗಲೇ ಚಿತ್ರದ ನಿರ್ಮಾಪಕರು ರಿಮೇಕ್‌ ಹಕ್ಕು ಪಡೆದುಕೊಂಡಿದ್ದಾರೆ.  ಈ ಸಿನಿಮಾದಲ್ಲೂ ‘ಮರ್‌ಜವಾ’ ತಂಡವೇ ಕೆಲಸ ಮಾಡಲಿದೆ.

ಇದು ಯಾವ ತೆಲುಗು ಸಿನಿಮಾದ ರಿಮೇಕ್‌ ಎಂಬ ವಿಷಯವನ್ನು ಚಿತ್ರತಂಡ ಸದ್ಯದಲ್ಲೇ ಬಹಿರಂಗಪಡಿಸಲಿದೆ ಎನ್ನಲಾಗಿದೆ. ‘ಮರ್‌ಜವಾ’ ಸಿನಿಮಾ ಬಿಡುಗಡೆಗೂ ಮುನ್ನವೇ ಹೊಸ ರಿಮೇಕ್‌ ಚಿತ್ರ ಮಾತುಕತೆಗಳು ನಡೆಯುತ್ತಿದ್ದವು. ಭೂಷಣ್‌ಕುಮಾರ್‌ ಈ ಸಿನಿಮಾದ ನಾಯಕನನ್ನಾಗಿ ಸಿದ್ದಾರ್ಥ್‌ ಅವರನ್ನೇ ಆಯ್ಕೆ ಮಾಡಿದ್ದರು ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ವಿಷ್ಣುವರ್ಧನ್‌ ನಿರ್ದೇಶನದ ವಿಕ್ರಮ್‌ ಬಾತ್ರಾ ಜೀವನಕತೆಯಾಧಾರಿತ ‘ಶೇರ್‌ಷಾ’ ಸಿನಿಮಾದಲ್ಲಿ ಸದ್ಯ ಸಿದ್ಧಾರ್ಥ್‌ ನಾಯಕನಾಗಿ ನಟಿಸುತ್ತಿದ್ದಾರೆ. ಇದನ್ನು ಕರಣ್‌ ಜೋಹರ್‌ ನಿರ್ಮಾಣ ಮಾಡುತ್ತಿದ್ದು, ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಾದ ಬಳಿಕ ಇಂದ್ರಕುಮಾರ್‌ ಅವರ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದರಲ್ಲಿ ಅಜಯ್‌ ದೇವಗನ್‌ ಹಾಗೂ ರಕುಲ್‌ ಪ್ರೀತ್‌ ಸಿಂಗ್‌ ಜೊತೆ ಸಿದ್ದಾರ್ಥ್‌ ತೆರೆ ಹಂಚಿಕೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)