ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸೈಮಾ‘ ಅವಾರ್ಡ್ ಪಾರ್ಟಿ: ನಿಯಮ ಉಲ್ಲಂಘನೆ; ಆಯೋಜಕರು, ಹೋಟೆಲ್ ವಿರುದ್ಧ ಎಫ್‌ಐಆರ್

Last Updated 21 ಸೆಪ್ಟೆಂಬರ್ 2022, 7:16 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದಿದ್ದ ಸೈಮಾ ಅವಾರ್ಡ್ 2022 ಬಳಿಕ ಆಯೋಜಿಸಿದ್ದ ಅದ್ದೂರಿ ಪಾರ್ಟಿಯಲ್ಲಿ ಭಾಗಿಯಾದವರಿಗೆ ಹಾಗೂ ಆಯೋಜಕರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ.

ನಗರದ ಪ್ರತಿಷ್ಠಿತ ಜೆಡಬ್ಲ್ಯೂ ಹೋಟೆಲ್‌ನಲ್ಲಿ ಈ ಪಾರ್ಟಿ ನಡೆದಿದ್ದು ಕಾನೂನು ಉಲ್ಲ‌ಂಘನೆಯ ಆರೋಪ ಕೇಳಿಬಂದಿದೆ‌.

ರಾತ್ರಿ 3.30 ಗಂಟೆಯ ತನಕ ಪಾರ್ಟಿ ಆಯೋಜಿಸಿದ್ದು ಆಯೋಜಕರು ಹಾಗೂ ಹೋಟೆಲ್ ಮ್ಯಾನೇಜರ್ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

'ಪಾರ್ಟಿಯಲ್ಲಿ ವಿವಿಧ ಭಾಷೆಯ ನಟ- ನಟಿಯರು ಭಾಗಿಯಾಗಿದ್ದರು. ರಾತ್ರಿ 3.30ರ ತನಕ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕಿದ್ದರು ಎನ್ನಲಾಗಿದೆ.

ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿಷೇಕ್ ಅಂಬರೀಶ್ ಅವರು ಪಾರ್ಟಿಯಲ್ಲಿದ್ದ ವಿಡಿಯೊ ವೈರಲ್ ಆಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT