ಕುಷ್ ಮತ್ತು ಖುಷಿ ಎಂಬ ಎರಡು ಹೆಸರುಗಳ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಅವರಿಗೆ ಅದೇನೋ ಒಂದು ಮೋಹ. ಅವರ ಮೊದಲ ಸಿನಿಮಾ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದ ನಾಯಕ ಮತ್ತು ನಾಯಕಿಯ ಹೆಸರು ಕ್ರಮವಾಗಿ ಕುಶ್ ಮತ್ತು ಖುಷಿ ಎಂದಾಗಿತ್ತು.

2016ರಲ್ಲಿ ತೆರೆಗೆ ಬಂದ ‘ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ’ ಚಿತ್ರದ ನಾಯಕ ಹಾಗೂ ನಾಯಕಿಯೂ ಹೆಸರುಗಳೂ ಇವೇ ಆಗಿದ್ದವು. ನಂತರ, 2017ರಲ್ಲಿ ತೆರೆಗೆ ಬಂದ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದಲ್ಲೂ ನಾಯಕ ಕುಶ್, ನಾಯಕಿ ಖುಷಿ.

ಹೆಸರಿನ ರೀತಿಯಲ್ಲೇ ಕೆಲವು ಕಲಾವಿದರ ವಿಚಾರದಲ್ಲೂ ಸುನಿ ಅವರಿಗೆ ಬಿಡಿಸಲಾಗದ ನಂಟೊಂದು ಇರುವಂತಿದೆ. ಈಗ ಅವರು ಮತ್ತೊಂದು ಸಿನಿಮಾ ಮಾಡಲು ಸಜ್ಜಾಗುತ್ತಿದ್ದು, ಅದಕ್ಕೆ ಪುನಃ ಗಣೇಶ್ ಅವರೇ ನಾಯಕ ಆಗಲಿದ್ದಾರೆ. ‘ಚಮಕ್’ ನಂತರ,ಈ ಚಿತ್ರದ ಮೂಲಕ ಸುನಿ–ಗಣೇಶ್ ಮತ್ತೆ ಒಂದಾಗುತ್ತಿದ್ದಾರೆ. ಈ ಚಿತ್ರದ ನಾಯಕ ಹಾಗೂ ನಾಯಕಿಯ ಹೆಸರು ‘ಕುಶ್’ ಮತ್ತು ‘ಖುಷಿ’ ಎಂದೇ ಇರಲಿದೆಯೇ ಎಂಬ ಪ್ರಶ್ನೆಗೆ ಚಿತ್ರತಂಡದಿಂದಲೇ ಉತ್ತರ ಸಿಗಬೇಕು!

ಗೋಲ್ಡನ್ ಸ್ಟಾರ್ ಗಣೇಶ್

‘ಗಣೇಶ್ ಜೊತೆಗಿನ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮ ಆಗಿಲ್ಲ. ಸುನಿ ಅವರು ಈಗ ಶರಣ್ ಜೊತೆಗಿನ ಅವತಾರ ಪುರುಷ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿ ಇದ್ದಾರೆ. ಈ ಚಿತ್ರವು ಶೀಘ್ರದಲ್ಲೇ ತೆರೆಗೆ ಬರಲಿದೆ. ಗಣೇಶ್ ಜೊತೆಗಿನ ಚಿತ್ರದ ಕೆಲಸಗಳು ಫೆಬ್ರುವರಿ ಕೊನೆಯ ವಾರದಲ್ಲಿ ಆರಂಭವಾಗಲಿವೆ’ ಎನ್ನುತ್ತಾರೆ ಸುನಿ ಆಪ್ತರು.

ಗಣೇಶ್ ಜೊತೆಗಿನ ಚಿತ್ರದಲ್ಲಿ ಇರುವುದು ರಿಯಾಲಿಟಿ ಶೋ ಹಾಗೂ ನ್ಯಾಯಾಲಯಕ್ಕೆ ಸಂಬಂಧಿಸಿದ ಕಥೆ. ಈ ಚಿತ್ರದ ನಾಯಕಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ನಾಯಕಿಯ ಹುಡುಕಾಟವನ್ನು ಚಿತ್ರತಂಡ ಮುಂದುವರಿಸಿದೆ.

‘ಭರಾಟೆ’ ಚಿತ್ರವನ್ನು ನಿರ್ಮಿಸಿದ್ದ ಸುಪ್ರೀತ್ ಅವರು ಹೊಸ ಚಿತ್ರಕ್ಕೆ ಬಂಡವಾಳ ಹೂಡಿಕೆ ಮಾಡಲಿದ್ದಾರೆ. ಚಮಕ್ ಚಿತ್ರದಲ್ಲಿ ಸುನಿ ಜೊತೆ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ಈ ಚಿತ್ರದಲ್ಲೂ ಇರಲಿದೆ. ಜುಡಾ ಸ್ಯಾಂಡಿ ಅವರ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.