ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಿಯ ‘ಸಿಂಪಲ್‌’ ಸ್ಕ್ರಿಪ್ಟ್‌ ಸಿದ್ಧ

Last Updated 20 ಮೇ 2020, 19:30 IST
ಅಕ್ಷರ ಗಾತ್ರ

ನಿರ್ದೇಶಕ ಸಿಂಪಲ್‌ ಸುನಿ ಅವರು, ಶರಣ್‌ ನಟನೆಯ ‘ಅವತಾರ ಪುರುಷ’ ಮತ್ತು ಗಣೇಶ್‌ ನಟನೆಯ ‘ಸಖತ್‌’ ಚಿತ್ರಗಳಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಈ ಚಿತ್ರಗಳ ಚಿತ್ರೀಕರಣ ಅರ್ಧಕ್ಕೆ ನಿಂತಿದೆ.

ಆದರೆ, ಅವರು ಮನೆಯಲ್ಲಿಸುಮ್ಮನೆ ಕುಳಿತಿಲ್ಲ. ಅವರೊಳಗಿನ ಕಥೆಗಾರ, ನಿರ್ದೇಶಕ ಲಾಕ್‌ಡೌನ್‌ನಲ್ಲಿ ಹೆಚ್ಚು ಕ್ರಿಯಾಶೀಲನಾಗಿದ್ದಾನಂತೆ. ಒಂದು ಸಿಂಪಲ್ಲಾದ ಚಿತ್ರಕಥೆ ರಚಿಸಿದ್ದಾರೆ. ಇದೊಂದು ಪ್ರಯೋಗಾತ್ಮಕ ಚಿತ್ರ. ಹಲವು ಆಯಾಮದ ಕಥೆಗಳು ಒಂದು ಬಿಂದುವಿನಲ್ಲಿ ಬಂದು ಕೂಡುವಂತಹ ವಿಭಿನ್ನ ಕಥೆ ಇದಾಗಿದೆ.

‘ಮೈಂಡ್‌ ಟಾಕ್‌ ಕಥೆ ಇದು. ಅಂದರೆ, ಪಾತ್ರಗಳ ತುಟಿಯ ಚಲನೆ ಕಡಿಮೆ ಇರುತ್ತದೆ. ಹೆಚ್ಚಿನ ಸಂಭಾಷಣೆಗಳು ಮನಸಿನಲ್ಲೇ ಮಾತನಾಡುವಂತಹು. ಇದೊಂಥರ ಹೊಸ ಪ್ರಯೋಗ. ಕಾಮಿಡಿ, ಥ್ರಿಲ್ಲರ್‌, ಸಸ್ಪೆನ್ಸ್‌ ಹೀಗೆ ಎಲ್ಲಾ ಜಾನರ್‌ಗಳ ಸಮ್ಮಿಶ್ರಣವಿದೆ. ಈ ಕಥೆ‌ ಹೊಳೆದಿದ್ದು ಲಾಕ್‌ಡೌನ್‌ ಅವಧಿಯಲ್ಲಿಯೇ. ಈಗ ಚಿತ್ರಕಥೆಯ ಮುಖ್ಯ ಭಾಗವನ್ನು ಬರೆದು ಮುಗಿಸಿದ್ದೇನೆ. ಸ್ಕ್ರಿಪ್ಟ್‌ನಲ್ಲಿ ಒಂದಿಷ್ಟು ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿಯಿವೆ’ ಎನ್ನುತ್ತಾರೆ ಸುನಿ.

ಯಾವ ಕಲಾವಿದರನ್ನು ಗಮನದಲ್ಲಿಟ್ಟುಕೊಂಡು ಈ ಸ್ಕ್ರಿಪ್ಟ್‌ ಸಿದ್ಧಪಡಿಸಿದ್ದೀರಿ ಎನ್ನುವ ಪ್ರಶ್ನೆಗೆ; ‘ಇಂಥವರೇ ಆಗಬಹುದೆಂದು ಪೂರ್ವ ನಿರ್ಧಾರ ಮಾಡಿಕೊಂಡು ಸ್ಕ್ರಿಪ್ಟ್‌ ಬರೆದಿಲ್ಲ. ಆದರೆ, ಹೊಸ ಮುಖಗಳನ್ನು ಪರಿಚಯಿಸುವ ಉದ್ದೇಶವಿದೆ’ ಎಂದರು.

‘ಶರಣ್‌ ಮತ್ತು ಆಶಿಕಾ ರಂಗನಾಥ್‌ ನಟನೆಯ ‘ಅವತಾರ ಪುರುಷ’ ಸಿನಿಮಾದ ಶೂಟಿಂಗ್‌ ಬಹುತೇಕ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಗಣೇಶ್‌ ನಟನೆಯ ‘ಸಖತ್‌’ ಚಿತ್ರದ ಚಿತ್ರೀಕರಣ 25 ದಿನಗಳ ಕಾಲ ನಡೆದಿದೆ. ಇನ್ನು 40 ದಿನಗಳ ಚಿತ್ರೀಕರಣ ಬಾಕಿಯಿದೆ. ಈ ಎರಡು ಚಿತ್ರದ ಹಾಡುಗಳ ಕಂಪೋಸಿಂಗ್‌ ಕೆಲಸ ನಡೆಯುತ್ತಿದೆ. ಲಾಕ್‌ಡೌನ್‌ನಿಂದಾಗಿ ಎಲ್ಲಾ ಯೋಜನೆಗಳು ಮುಂದಕ್ಕೆ ಹೋಗಿವೆ. ವಿದೇಶಕ್ಕೆ ಶೂಟಿಂಗ್‌ ಹೋಗು ಯೋಜನೆಯನ್ನು ಕೈಬಿಡಲಾಗಿದೆ. ರಾಜ್ಯದೊಳಗೆಯೇ ಶೂಟಿಂಗ್‌ ನಡೆಸಲು ಸ್ಕ್ರಿಪ್ಟ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT