ಭಾನುವಾರ, ಡಿಸೆಂಬರ್ 15, 2019
25 °C

ಸಾಮಾಜಿಕ ಮಾಧ್ಯಮಗಳಲ್ಲಿ ನಟ ಯಶ್‌ ಮಗಳ ಫೋಟೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟಿ ರಾಧಿಕಾ ಪಂಡಿತ್‌ ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಅವರ ಅಭಿಮಾನಿಗಳಲ್ಲಿಯೂ ಸಂಭ್ರಮ ಹೆಚ್ಚಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳನ್ನು ಕೋರುತ್ತಿದ್ದಾರೆ. 

ರಾಧಿಕಾ ಅವರ ತಂದೆ ಹಾಗೂ ನಟ ಯಶ್‌ ತೊಟ್ಟಿಲಲ್ಲಿರುವ ಮಗುವನ್ನು ನೋಡುತ್ತಿರುವ ಪೋಟೊ ವೈರಲ್‌ ಆಗಿದೆ. ಕೆಜಿಎಫ್‌ ಚಿತ್ರದ ಅಭಿಮಾನಿಗಳ ಟ್ವಿಟರ್ ಪುಟದಲ್ಲಿ ಮಗುವಿನ ವಿಡಿಯೊ ಕೂಡ ಪ್ರಕಟಗೊಂಡಿದೆ. 

ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. 

ಇದನ್ನೂ ಓದಿ: ಜೋಗುಳದ ಗುಂಗಿನಲ್ಲಿ ರಾಧಿಕಾ ಪಂಡಿತ್‌

ಭಾನುವಾರ ಬೆಳಿಗ್ಗೆ ಫೋರ್ಟಿಸ್‌ ಆಸ್ಪತ್ರೆಯಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೆರಿಗೆಗೂ ಮುನ್ನ ರಾಧಿಕಾ ಇನ್‌ಸ್ಟಾಗ್ರಾಂನಲ್ಲಿ ಗಂಡು ಮಗುವಿಗೆ ತನ್ನ ವೋಟ್‌ ನೀಡಿ ಯಶ್ ಸಹಿತ ಫೋಟೊ ಪ್ರಕಟಿಸಿಕೊಂಡಿದ್ದರು. ಯಶ್‌ ಹೆಣ್ಣು ಮಗುವಿನ ಪರವಾಗಿ ಇಚ್ಛೆ ವ್ಯಕ್ತಪಡಿಸಿದ್ದರು. 

ಇದನ್ನೂ ಓದಿ: ಯಶ್‌–ರಾಧಿಕಾ ದಂಪತಿಗೆ ಹೆಣ್ಣು ಮಗು; ಜೂನಿಯರ್‌ ರಾಧಿಕಾ ಕಾಣಲು ಅಭಿಮಾನಿಗಳ ಕಾತರ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು