ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೌಡಿ ರಾಥೋರ್‌ ಚಿತ್ರದ ಫ್ಲರ್ಟಿಂಗ್ ದೃಶ್ಯದಲ್ಲಿ ನಟಿಸಬಾರದಿತ್ತು: ಸೋನಾಕ್ಷಿ ಸಿನ್ಹಾ

Published 15 ಮೇ 2023, 13:41 IST
Last Updated 15 ಮೇ 2023, 13:41 IST
ಅಕ್ಷರ ಗಾತ್ರ

ವಿಭಿನ್ನ ಪಾತ್ರಗಳಲ್ಲಿ ತೊಡಗಿಸಿಕೊಂಡು ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡಿದ್ದಾರೆ. 2012ರ ಸೂಪರ್‌ ಹಿಟ್‌ ಚಿತ್ರ ‘ರೌಡಿ ರಾಥೋರ್‌‘ ಬಗ್ಗೆ ಮಾತನಾಡುತ್ತಾ, ಚಿತ್ರದ ‘ಫ್ಲರ್ಟಿಂಗ್ ದೃಶ್ಯ‘ವೊಂದರಲ್ಲಿ ನಾನು ಕಾಣಿಸಿಕೊಳ್ಳಬಾರದಿತ್ತು ಎಂದು ಹೇಳಿದರು.

2012ರಲ್ಲಿ ತೆರೆಕಂಡ ‘ರೌಡಿ ರಾಥೋರ್‌‘ ಕಮರ್ಷಿಯಲ್‌ ಸಿನಿಮಾದಲ್ಲಿ ಅಕ್ಷಯ್‌ಕುಮಾರ್‌ ಹಾಗೂ ಸೋನಾಕ್ಷಿ ಸಿನ್ಹಾ ಜೊತೆಯಾಗಿದ್ದರು. ಈ ಚಿತ್ರದ ಒಂದು ದೃಶ್ಯದಲ್ಲಿ ನಟ (ಅಕ್ಷಯ್‌ ಕುಮಾರ್‌) ನಟಿಯ (ಸೋನಾಕ್ಷಿ ಸಿನ್ಹಾ) ಸೊಂಟ ಹಿಡಿದುಕೊಂಡು ‘ಯೇ ಮೇರಾ ಮಾಲ್‌ ಹೈ‘(ಇದು ನನ್ನ ಆಸ್ತಿ/ಸರಕು) ಎಂದು ಹೇಳುತ್ತಾನೆ. ಈ ದೃಶ್ಯ ಹಲವು ಕಾರಣಗಳಿಗೆ ಚರ್ಚೆಯಾಗಿದ್ದು, ಕೆಲ ಮಹಿಳೆಯರು ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ತಮ್ಮ ಹೊಸ ಚಿತ್ರದ ಪ್ರಮೋಷನ್‌ ಸಲುವಾಗಿ ಯೂಟ್ಯೂಬ್‌ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸೋನಾಕ್ಷಿ ಸಿನ್ಹಾ ರೌಡಿ ರಾಥೋರ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ‘ಪ್ರಸಕ್ತ ಸಂದರ್ಭದಲ್ಲಿ ಅಂತಹ ದೃಶ್ಯಗಳಲ್ಲಿ ನಟಿಸಲು ನಾನು ಒಪ್ಪುವುದಿಲ್ಲ. ಆದರೆ, ಆಗ ನಾನು ತುಂಬಾ ಚಿಕ್ಕವಳಾಗಿದ್ದು ನನಗೆ ಇಂತಹ ದೃಶ್ಯಗಳ ಬಗ್ಗೆ ಅರ್ಥವಾಗುತ್ತಿರಲಿಲ್ಲ. ಪ್ರಭುದೇವ್‌ ನಿರ್ದೇಶನದ, ಬನ್ಸಾಲಿ ನಿರ್ಮಾಣದ, ಅಕ್ಷಯ್‌ ಕುಮಾರ್ ನಟನೆಯ ಚಿತ್ರವನ್ನು ಯಾರು ಬೇಡ ಎನ್ನುತ್ತಾರೆ ಹೇಳಿ? ನನಗೆ ಗೊತ್ತಿರುವುದು ಅಷ್ಟೇ. ಈಗ ನಾನು ಪ್ರಬುದ್ಧಳಾಗಿದ್ದೇನೆ. ಚಿತ್ರದ ಪ್ರತಿಯೊಂದು ದೃಶ್ಯವನ್ನು ಓದುತ್ತೇನೆ. ಈಗ ಅಂತಹ ಯಾವುದೇ ದೃಶ್ಯದಲ್ಲಿಯೂ ನಾನು ಕಾಣಿಸಿಕೊಳ್ಳುವುದಿಲ್ಲ‘ ಎಂದು ಹೇಳಿದರು.

‘ಇಂತಹ ಸಂದರ್ಭಗಳಲ್ಲಿ ಎಲ್ಲರೂ ಚಿತ್ರದ ನಟಿಯನ್ನೇ ದೂಷಿಸುತ್ತಾರೆ. ಆ ಸಂಭಾಷಣೆಯನ್ನು ಯಾರು ಬರೆದಿರುತ್ತಾರೋ ಅವರನ್ನು ಯಾರು ಕೇಳುವುದಿಲ್ಲ. ಎಲ್ಲರೂ ಬೊಟ್ಟು ಮಾಡುವುದು ನಟಿಯನ್ನೇ. ನಿಜವಾಗಿ ಚಿತ್ರದ ನಿರ್ದೇಶಕ ಮತ್ತು ಸಂಭಾಷಣೆಯನ್ನು ಬರೆದವರನ್ನು ದೂಷಿಸಬೇಕು. ಅದನ್ನು ಯಾರು ಮಾಡುವುದಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

ಸೋನಾಕ್ಷಿ ಸಿನ್ಹಾ ಅಮೆಜಾನ್‌ ಪ್ರೈಮ್‌ ವಿಡಿಯೊ ವೆಬ್‌ ಸಿರೀಸ್‌ ‘ದಹಾದ್‌‘ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಖಡಕ್‌ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT