ಸ್ಪೈಡರ್‌ ಮ್ಯಾನ್‌ಗೆ ಹೊಸ ಅಂಗಿ!

7

ಸ್ಪೈಡರ್‌ ಮ್ಯಾನ್‌ಗೆ ಹೊಸ ಅಂಗಿ!

Published:
Updated:
Prajavani

ಮಕ್ಕಳ ಅಚ್ಚುಮೆಚ್ಚಿನ ಸೂಪರ್‌ ಹೀರೊ, ಕೆಂಪು ಉಡುಗೆಯ ‘ಸ್ಪೈಡರ್‌ ಮ್ಯಾನ್‌’ನ ಹೊಸ ಸರಣಿ ‘ಸ್ಪೈಡರ್‌ ಮ್ಯಾನ್‌: ಫಾರ್‌ ಫ್ರಂ ಹೋಮ್‌?’ ಇನ್ನೇನು ತೆರೆ ಮೇಲೆ ಬರಲಿದೆ. ಈ ಬಾರಿ ಹೊಸ ಹೊಸ ಸಾಹಸಗಳೊಂದಿಗೆ ಪೀಟರ್‌ ಪಾರ್ಕರ್‌ ಮಕ್ಕಳೊಂದಿಗೆ ದೊಡ್ಡವರನ್ನೂ ಸೆಳೆಯುವ ಸಾಧ್ಯತೆ ಇದೆ.

ಎಲ್ಲಕ್ಕಿಂತ ಮುಖ್ಯವಾಗಿ ಗಮನಾರ್ಹ ಸಂಗತಿ ಸ್ಪೈಡರ್‌ಮ್ಯಾನ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿರುವುದು.

ಹೌದು, ಸ್ಪೈಡರ್‌ ಮ್ಯಾನ್‌ ಎಂದಾಕ್ಷಣ ನೆನಪಿಗೆ ಬರುತ್ತಿದ್ದುದು ತಲೆಯಿಂದ ಕಾಲಿನವರೆಗೆ ಕೆಂಪು, ಕಪ್ಪು, ಬಿಳಿ ಮತ್ತು ನೀಲಿ ಬಣ್ಣಗಳ ಸಂಯೋಜನೆಯ ಮಾಸ್ಕ್‌ ಧರಿಸಿದ ‘ನೆರೆಮನೆಯ ಆಪದ್ಬಾಂಧವ’ ಪೀಟರ್‌ ಪಾರ್ಕರ್‌. ಇದುವರೆಗೂ ಈ ಬಣ್ಣಗಳ ಸಂಯೋಜನೆಯಲ್ಲೇ ಅಲ್ಪಸ್ವಲ್ಪ ಬದಲಾವಣೆ ಮಾಡಲಾಗುತ್ತಿತ್ತು. ಆದರೆ ಈಗ ಬಾರಿ ಸಂಪೂರ್ಣ ಮಾಸ್ಕ್‌ ಬದಲಾಗಲಿದೆ.

ಕೆಂಪು ಬಣ್ಣ ಎದ್ದುಕಾಣುವಂತಿದ್ದ ಹಳೆಯ ಮಾಸ್ಕ್‌ನಲ್ಲಿ ಪೀಟರ್ ಪಾರ್ಕರ್‌ ಜೇಡನ ಬಲೆ ಬಿಡುತ್ತಿದ್ದ. ಹೊಸ ಸರಣಿಯಲ್ಲಿ ಅವನು ಧರಿಸುವ ಮಾಸ್ಕ್‌ನಲ್ಲಿ ಕಂದು ಕಪ್ಪು ಬಣ್ಣ ಪ್ರಧಾನವಾಗಿರುತ್ತದೆ. ‘ಸ್ಟೆಲ್ತ್ ಸೂಟ್‌’ ಎನ್ನಲಾಗುವ ಹೊಸ ಉಡುಗೆಯಲ್ಲಿ ಪೀಟರ್‌ ಪಾರ್ಕರ್‌ಗೆ ಹೊಸ ಕನ್ನಡಕವೂ ಅವನ ಆಕರ್ಷಣೆಯನ್ನು ಹೆಚ್ಚಿಸಲಿದೆ. ಎದೆಭಾಗಕ್ಕೆ ಕವಚದಂತಹ ಕಪ್ಪು ವಿನ್ಯಾಸವೂ ಗಮನ ಸೆಳೆಯುವಂತಿದೆ.

ಟ್ರೇಲರ್‌ಗೆ ಭಾರಿ ಮೆಚ್ಚುಗೆ

‘ಸ್ಪೈಡರ್‌ಮ್ಯಾನ್‌ ಫಾರ್‌ ಫ್ರಂ ಹೋಮ್‌’ನ ಟೀಸರ್‌ ಟ್ರೇಲರನ್ನು ಮಾರ್ವೆಲ್‌ ಸ್ಟುಡಿಯೋಸ್‌ ಕೆಲದಿನಗಳ ಹಿಂದೆ ಬಿಡುಗಡೆ ಮಾಡಿತು. ಅದಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. 

‘ಸ್ಪೈಡರ್‌ಮ್ಯಾನ್‌–ಕಮಿಂಗ್ ಹೋಮ್‌’ ಮುಂದುವರಿದ ಚಿತ್ರ ಸರಣಿ ಇದು. ಪೀಟರ್‌ ಪಾರ್ಕರ್‌ ಆಗಿ ಟಾಮ್‌ ಹಾಲೆಂಡ್ ಹೊಸ ಸಾಹಸಗಳಲ್ಲಿ ಮಿಂಚಿದ್ದಾರೆ. ಲಂಡನ್‌ ಒಳಗೊಂಡು ಇದೇ ಜುಲೈ ಐದರಂದು ಈ ಚಿತ್ರ ಸರಣಿ ತೆರೆಗೆ ಬರಲಿದೆ. ಮಾರ್ವೆಲ್‌ ಸಿನಿಮ್ಯಾಟಿಕ್‌ ಯುನಿವರ್ಸ್‌ ಎಂಬ ನಿರ್ಮಾಣ ಸಂಸ್ಥೆಯ 23ನೇ ಸಿನಿಮಾ ಇದಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !