ಕನ್ನಡದ ‘ಕಿಸ್’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಶ್ರೀಲೀಲಾ ಅವರ ಅದೃಷ್ಟವೇ ಬದಲಾಗಿ ಬಿಟ್ಟಿದೆ. ಸಾಲು ಸಾಲು ಸಿನಿಮಾಗಳಲ್ಲಿ ಸಕ್ರಿಯರಾಗಿರುವ ಶ್ರೀಲೀಲಾ ತೆಲುಗಿನಲ್ಲಿ ‘ಧಮಾಕ’ ಸಿನಿಮಾದ ಬಳಿಕ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ನಟಿ ಶ್ರೀಲೀಲಾ
ಚಿತ್ರ: ಇನ್‌ಸ್ಟಾಗ್ರಾಂ
1
ಸ್ಯಾಂಡಲ್‌ವುಡ್, ಟಾಲಿವುಡ್ ಬಳಿಕ ಬಾಲಿವುಡ್‌ನಿಂದ ಬಂದ ದೊಡ್ಡ ಅವಕಾಶಗಳನ್ನು ನಟಿ ಗಿಟ್ಟಿಸಿಕೊಂಡಿದ್ದಾರೆ. ನಟ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂಗೆ ನಟಿಯಾಗಿ ಶ್ರೀಲೀಲಾ ಅಭಿನಯಿಸುವುದಕ್ಕೆ ಸಜ್ಜಾಗಿದ್ದಾರಂತೆ. ಈ ಕುರಿತು ಶ್ರೀಲೀಲಾ ಜೊತೆ ಮಾತುಕತೆಯೂ ಆಗಿದ್ದು, ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ನಟಿ ಶ್ರೀಲೀಲಾ
ಚಿತ್ರ: ಇನ್‌ಸ್ಟಾಗ್ರಾಂ
2
ನಟಿ ಶ್ರೀಲೀಲಾ ಅವರ ಈ ವೇಗದ ಬೆಳವಣಿಗೆಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸುತ್ತಿದ್ದಾರೆ. ಈಗಾಗಲೇ ನಟ ಮಹೇಶ್ ಬಾಬು ನಟನೆಯ 'ಗುಂಟುರು ಖಾರಂ', ಬಾಲಕೃಷ್ಣ ನಟನೆಯ 'ಭಗವಂತ್ ಕೇಸರಿ', ಪವನ್ ಕಲ್ಯಾಣ್ ನಟನೆಯ 'ಉಸ್ತದ್ ಭಗತ್ ಸಿಂಗ್' ಚಿತ್ರಗಳಲ್ಲಿ ಶ್ರೀಲೀಲಾ ನಟಿಸಿದ್ದಾರೆ.
ನಟಿ ಶ್ರೀಲೀಲಾ
ಚಿತ್ರ: ಇನ್‌ಸ್ಟಾಗ್ರಾಂ
3
ರಾಮ್ ಪೋತಿನೇನಿ, ವೈಷ್ಣವ್ ತೇಜ್ ನಟನೆಯ ಚಿತ್ರಗಳಿಗೂ ಶ್ರೀಲೀಲಾ ನಟಿಯಾಗಿದ್ದಾರೆ. ವಿಜಯ್ ದೇವರಕೊಂಡ, ನಿತೀನ್, ನವೀನ್ ಪೋಲಿಶೆಟ್ಟಿ ಜೊತೆಯೂ ಒಂದೊಂದು ಸಿನಿಮಾ ಅಧಿಕೃತವಾಗಿದೆ ಎನ್ನಲಾಗಿದೆ.
ನಟಿ ಶ್ರೀಲೀಲಾ
ಚಿತ್ರ: ಇನ್‌ಸ್ಟಾಗ್ರಾಂ
4
ನಟಿ ಶ್ರೀಲೀಲಾ ಅವರು ಅತಿ ಚಿಕ್ಕ ವಯಸ್ಸಿಗೆ 3 ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ಈ ಬಗ್ಗೆ ನಟಿ ಮುಕ್ತವಾಗಿ ಹೇಳಿಕೊಂಡಿದ್ದರು. ‘ನಾನು ಆ ಮಕ್ಕಳು ತಮ್ಮೊಂದಿಗೆ ವಾಸಿಸುವುದಿಲ್ಲವಾದರೂ, ಯೋಗಕ್ಷೇಮದ ಬಗ್ಗೆ ಗಮನ ನೀಡುತ್ತೇನೆ ಜತೆಗೆ ಅವರ ಜೀವನದಲ್ಲಿ ನಿರಂತರವಾಗಿ ಇರುತ್ತೇನೆ’ ಎಂದು ಹೇಳಿಕೊಂಡಿದ್ದರು.
ನಟಿ ಶ್ರೀಲೀಲಾ
ಚಿತ್ರ: ಇನ್‌ಸ್ಟಾಗ್ರಾಂ
5
ಪ್ರಸ್ತುತವಾಗಿ ನಟಿ ಶ್ರೀಲೀಲಾ ಅವರು ಹಲವು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಹಿಂದಿಯಲ್ಲಿ ಅವರ ನಟನೆಯ ‘ಆಶಿಖಿ 3’ ಸಿನಿಮಾ ಬಿಡುಗಡೆ ಆಗಬೇಕಿದೆ. ಅದರ ಜೊತೆಗೆ ಇನ್ನೂ ಎರಡು ಹೊಸ ಹಿಂದಿ ಸಿನಿಮಾಗಳನ್ನು ಶ್ರೀಲೀಲಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ಜೊತೆಗೆ ನಟಿಸಿರುವ ‘ಉಸ್ತಾದ್ ಭಗತ್ ಸಿಂಗ್’ ಅದು ಶೀಘ್ರವೇ ಬಿಡುಗಡೆ ಆಗಲಿದೆ.
ನಟಿ ಶ್ರೀಲೀಲಾ
ಚಿತ್ರ: ಇನ್‌ಸ್ಟಾಗ್ರಾಂ
6
ಇತ್ತೀಚೆಗೆ ಶಿವಕಾರ್ತಿಕೇಯನ್ ಮತ್ತು ಶ್ರೀಲೀಲಾ ನಟನೆಯ ಬಹುನಿರೀಕ್ಷಿತ ತಮಿಳು ಸಿನಿಮಾ 'ಪರಾಶಕ್ತಿ' ಜನವರಿ 10ರಂದು ಬಿಡುಗಡೆಯಾಗಿತ್ತು. ನಟಿ ಶ್ರೀಲೀಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಪ್‌ಡೇಟ್‌ಗಳನ್ನು ನೀಡುತ್ತಿರುತ್ತಾರೆ.