ಮುಂಬೈ: ದಿವಗಂತ ನಟಿ ಶ್ರೀದೇವಿ ಮತ್ತು ಅನಿಲ್ ಕಪೂರ್ ಅಭಿನಯದ ಲಮ್ಹೆ ಚಿತ್ರ 34 ವರ್ಷಗಳ ಬಳಿಕ ಮತ್ತೆ ಇದೇ ಮಾರ್ಚ್ 21ರಂದು ಚಿತ್ರಮಂದಿರಗಳಲ್ಲಿ ಮರು ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅನಿಲ್ ಕಪೂರ್ ಮಾಹಿತಿ ನೀಡಿದ್ದಾರೆ.

ಯಶ್ ಚೋಪ್ರಾ ನಿರ್ದೇಶನದ ಈ ಚಿತ್ರ 1991 ರಲ್ಲಿ ಬಿಡುಗಡೆಯಾಗಿತ್ತು. ಶ್ರೀದೇವಿ ದ್ವಿಪಾತ್ರದಲ್ಲಿ ತೆರೆ ಮೇಲೆ ಮಿಂಚಿದ್ದರು.ಸ
.ಸಿನಿ ಬಿಟ್ಸ್ | ವೀರ ಕಂಬಳ ಹಾಡಿಗೆ ಕೈಲಾಶ್ ಖೇರ್ ಧ್ವನಿ.ಸಿನಿ ಸುದ್ದಿ | ಹೊರಬಂತು ‘ಠಾಣೆ’ಯ ಹಾಡು.
’ಕಾಲಾತೀತ.. ಲಮ್ಹೆ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಇದೇ ಮಾರ್ಚ್ 21ರಂದು ವೀಕ್ಷಿಸಿ ಎಂದು ಅನಿಲ್ ಕಪೂರ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರಕ್ಕೆ ಹನಿ ಇರಾನಿ ಮತ್ತು ರಾಹಿ ಮಾಸೂಮ್ ರಾಜಾ ಅವರು ಚಿತ್ರ ಕಥೆ ಬರೆದಿದ್ದಾರೆ. ಈ ಚಿತ್ರದಲ್ಲಿ ವಹೀದಾ ರೆಹಮಾನ್, ಅನುಪಮ್ ಖೇರ್ ಮತ್ತು ದೀಪಕ್ ಮಲ್ಹೋತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಪೂರ್ ಮುಂಬರುವ ‘ಸುಬೇದಾರ‘ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
.ಸಿನಿ ಸುದ್ದಿ | ‘ವನ್ಯ’ ಸಿನಿಮಾ ಶೀರ್ಷಿಕೆ ಬಿಡುಗಡೆ .ಸಿನಿ ಸುದ್ದಿ | ರವಿಚಂದ್ರನ್ ಹೊಸ ಸಿನಿಮಾ ‘ಪ್ಯಾರ್’ .ಸಿನಿ ಬಿಟ್ಸ್ | ವೀರ ಕಂಬಳ ಹಾಡಿಗೆ ಕೈಲಾಶ್ ಖೇರ್ ಧ್ವನಿ.ಸಿನಿ ಸುದ್ದಿ | ‘ಸೂಪರ್ ಸ್ಟಾರ್ ವಿದ್ಯಾ’ಳಾದ ಮಲೈಕಾ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.