ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯದಶಮಿಗೆ ಬರಲಿದೆ ಶ್ರೀಕೃಷ್ಣ@ಜಿಮೇಲ್‌ ಡಾಟ್‌ಕಾಮ್‌

Last Updated 30 ಸೆಪ್ಟೆಂಬರ್ 2021, 10:40 IST
ಅಕ್ಷರ ಗಾತ್ರ

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಚಿತ್ರ ಶ್ರೀಕೃಷ್ಣ@ಜಿಮೇಲ್‌ ಡಾಟ್‌ಕಾಮ್‌ ವಿಜಯದಶಮಿಯಂದು ತೆರೆಗೆ ಬರಲಿದೆ.

ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಈ ಚಿತ್ರದ ನಿರ್ಮಾಪಕರು.ಬೃಂದಾ ಎನ್. ಜಯರಾಂ ಈ ಚಿತ್ರದ ಸಹ ನಿರ್ಮಾಪಕರು. ನಾಗಶೇಖರ್ ನಿರ್ದೇಶಿಸಿದ್ದಾರೆ. ಕಥೆ ಸಂಭಾಷಣೆಯೂ ನಿರ್ದೇಶಕರದ್ದೇ. ಚಿತ್ರಕಥೆಯನ್ನು ಪ್ರೀತಂ ಗುಬ್ಬಿ ಬರೆದಿದ್ದಾರೆ.

ಭಾವನಾ ಮೆನನ್ ಈ ಚಿತ್ರದ ನಾಯಕಿ. ಚಂದನ್ ಗೌಡ ಇನ್ನೊಬ್ಬ ನಾಯಕ. ಅತಿಥಿ ಪಾತ್ರದಲ್ಲಿ ನಿರ್ದೇಶಕ, ನಾಯಕ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ಸಾಧುಕೋಕಿಲ, ಅಚ್ಯುತರಾವ್, ಸಾತ್ವಿಕ್(ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮುಂತಾದವರ ಅದ್ದೂರಿ ತಾರಾಬಳಗ ಈ ಚಿತ್ರದಲ್ಲಿದೆ.

ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ ‘ಅಮರ್’ ಚಿತ್ರವನ್ನು ನಾಗಶೇಖರ್ ಅವರೆ ನಿರ್ದೇಶಿಸಿದ್ದರು.

ಐದು ಹಾಡುಗಳಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕವಿರಾಜ್ ಗೀತರಚನೆ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT