ಮಂಗಳವಾರ, ಅಕ್ಟೋಬರ್ 22, 2019
25 °C
ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂದೂ ಸುದೀಪ್‌ ಗುಡುಗು

ಪೈಲ್ವಾನ್‌ ಶ್ರಮ ಹಾಳು ಮಾಡಲು ನಿಂತವರ ನೆಮ್ಮದಿಯ ನಿದ್ರೆ ಕೆಲದಿನ ಮಾತ್ರ: ಸುದೀಪ್‌

Published:
Updated:

ಬೆಂಗಳೂರು: ನಾನು ಹಾನು ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ. ಪೈಲ್ವಾನ್‌ ಚಿತ್ರ ತಂಡದ ಶ್ರಮ ಹಾಳು ಮಾಡಲು ನಿಂತರವರ ನೆಮ್ಮದಿಯ ನಿದ್ರೆ ಇನ್ನು ಕೆಲವು ದಿನ ಮಾತ್ರ ಎಂದು ಕನ್ನಡದ ನಟ ಸುದೀಪ್‌ ಅವರು ಶುಕ್ರವಾರ ರಾತ್ರಿ ಟ್ವೀಟ್‌ ಮಾಡಿದ್ದಾರೆ. 

‘ಪೈಲ್ವಾನ್‌’ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಂಡ ಬಳಿಕ ಅದನ್ನು ಕೆಲ ಕಿಡಿಗೇಡಿಗಳು ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು. ಅದರ ಲಿಂಕ್‌ ಅನ್ನು ಸಾಮಾಜಿಕ ತಾಣಗಳಲ್ಲಿ ಹಂಚಲಾಗಿತ್ತು. ಇದು ಉದ್ದೇಶಪೂರ್ವಕ ಕೃತ್ಯ, ಇದರ ಹಿಂದೆ ಪಟ್ಟಭದ್ರರಿದ್ದಾರೆ ಎಂದು ಸುದೀಪ್‌ ಅಭಿಮಾನಿಗಳು ಕಿಡಿಕಾರಿದ್ದರು. ಈ ವಿಚಾರವಾಗಿ ಸುದೀಪ್‌ ಮತ್ತು ದರ್ಶನ್‌ ಅಭಿಮಾನಿಗಳ ನಡುವೆ ಸಾಮಾಜಿಕ ತಾಣಗಳಲ್ಲಿ ವಾಕ್ಸಮರಗಳು ನಡೆದಿವೆ.  

ಇದೇ ವಿಚಾರವಾಗಿ ದರ್ಶನ್‌ ಮತ್ತು ಸುದೀಪ್‌ ನಡುವೆ ಮುಸುಕಿನ ಗುದ್ದಾಟವೂ ನಡೆಯುತ್ತಿದೆ. ಹೀಗಿರುವಾಗಲೇ ದರ್ಶನ್‌  ಟ್ವೀಟ್‌ ಮಾಡಿ ನನ್ನ ಅಭಿಮಾನಿಗಳನ್ನು ಕೆಣಕದಂತೆ ಎಚ್ಚರಿಕೆ ರವಾನಿಸಿದ್ದರು. ಈ ಮಧ್ಯೆ ಇಂದು ಟ್ವೀಟ್‌ ಮಾಡಿರುವ ಸುದೀಪ್‌, ದರ್ಶನ್‌ ಅವರ ಧಾಟಿಯಲ್ಲೇ ಎಚ್ಚರಿಕೆ ರವಾನಿಸಿದ್ದಾರೆ. ಆದರೆ, ಯಾರಿಗೆ ಎಂಬುದರ ಸ್ಪಷ್ಟತೆ ಇಲ್ಲ. 

‘ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ,ಇನ್ನು ಕೆಲವು ದಿನಗಳು ಮಾತ್ರ,’ ಎಂದು ಅವರು ಬರೆದುಕೊಂಡಿದ್ದಾರೆ. 

 

ಸುದೀಪ್ ಸೆಕ್ಸಿಸ್ಟ್ ಟ್ವೀಟ್‌ಗೆ ಕಿಡಿ

ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂಬ ಸುದೀಪ್ ಟ್ವೀಟ್‌ಗೆ ನೆಟಿಜನ್‌ಗಳು ಕಿಡಿ ಕಾರಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)