‘ದಿ ಆರ್ಚೀಸ್’ ಸಿನಿಮಾವನ್ನು ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ, ಶ್ರೀದೇವಿಯ ಎರಡನೇ ಮಗಳು ಖುಷಿ ಕಪೂರ್ ಕೂಡ ನಟಿಸಿದ್ದಾರೆ.
ಒಂದೇ ಶಾಲೆಯಲ್ಲಿ ಓದುತ್ತಿರುವ ಹದಿಹರೆಯದ ಸ್ನೇಹಿತರ ಗುಂಪಿನ ಕಥೆ ಇದು. ಕುಟುಂಬ, ಸ್ನೇಹ, ಪರಿಸರ, ಪ್ರೇಮ ಮುಂತಾದ ಅಂಶಗಳಿರುವ ಈ ಸಿನಿಮಾ ಸಾಮಾಜಿಕ ಕಳಕಳಿಯನ್ನು ಬಿಂಬಿಸುತ್ತದೆ. ಸ್ಟಾರ್ ನಟರ ಮಕ್ಕಳಿಗೆ ಈ ಚಿತ್ರದಲ್ಲಿ ಸಖತ್ ಸ್ಕೋಪ್ ಸಿಕ್ಕಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸಿನಿಮಾ ಒಟಿಟಿಯಲ್ಲಿ ಡಿಸೆಂಬರ್ 7ರಂದ ಬಿಡುಗಡೆಯಾಗಲಿದೆ.