ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ನಟಿ ಕರೀನಾ ಕಪೂರ್‌ ಅಭಿನಯದ ‘ಜಾನೆ ಜಾನ್‌’ ಚಿತ್ರ ಸೆ.21ರಂದು ಬಿಡುಗಡೆ

Published 25 ಆಗಸ್ಟ್ 2023, 14:04 IST
Last Updated 25 ಆಗಸ್ಟ್ 2023, 14:04 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಕರೀನಾ ಕಪೂರ್‌ ಅಭಿನಯದ ಜಾನೆ ಜಾನ್‌ ಚಿತ್ರ ಸೆಪ್ಟೆಂಬರ್‌ 21 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಜೈದೀಪ್‌ ಅಹ್ಲಾವತ್‌ ಮತ್ತು ವಿಜಯ್‌ ವರ್ಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಹಾಗೂ ನಿರ್ಮಾಪಕ ಸುಜೋಯ್‌ ಘೋಷ್‌ ಅವರ ಜಾನೆ ಜಾನ್‌ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಕರೀನಾ ಅವರ 43ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನೆಟ್‌ಫ್ಲಿಕ್ಸ್‌ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಲೇಖಕ ಕೀಗೋ ಹಿಗಾಶಿನೊ ಅವರಿಂದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಜಪಾನೀಸ್‌ ಕಾದಂಬರಿ ‘ಡಿವೋಷನ್‌ ಆಫ್‌ ಸಸ್ಪೆಕ್ಟ್‌ ಎಕ್ಸ್‌’ ಅನ್ನು ಆಧರಿಸಿದ ಕ್ರೈಮ್‌ ಥ್ರಿಲ್ಲರ್‌ ಕಥಾ ಹಂದರವನ್ನು ಒಳಗೊಂಡಿರುವ ಚಿತ್ರವು ಸೆ. 21 ರಂದು ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

‘ಕರೀನಾ ಕಪೂರ್‌ ಅವರ ಜನ್ಮದಿನದಂದು ‘ಜಾನೆ ಜಾನ್‌’ ಚಿತ್ರ ಬರುತ್ತಿದೆ. ನಿಮ್ಮ ಕ್ಯಾಲೆಂಡರ್‌ಗಳಲ್ಲಿ ದಿನಾಂಕವನ್ನು ಗುರುತು ಮಾಡಿಕೊಳ್ಳಿ ‘ಜಾನೆ ಜಾನ್‌’ ಸೆ. 21ರಂದು ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರ ಆಗಮಿಸುತ್ತದೆ!’ ಎಂದು ನೆಟ್‌ಫ್ಲಿಕ್ಸ್‌ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದೆ.

‘ನಾನು ‘ಡಿವೋಷನ್‌ ಆಫ್‌ ಸಸ್ಪೆಕ್ಟ್‌ ಎಕ್ಸ್‌’ ಓದಿದ ದಿನದಿಂದಲೂ, ನಾನು ಅದನ್ನು ಸಿನಿಮಾ ಮಾಡಬೇಕೆಂದು ಬಯಸಿದ್ದೆ. ಇದು ನಾನು ಓದಿದ ಅತ್ಯಂತ ಅದ್ಭುತವಾದ ಪ್ರೇಮಕಥೆಯಾಗಿದೆ. ಇಂದು ಆ ಕಥೆ ತೆರೆಯ ಮೇಲೆ ಜೀವಂತವಾಗಿದ್ದು, ಕರೀನಾ, ಜೈದೀಪ್‌ ಮತ್ತು ವಿಜಯ್‌ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಕಥೆಯನ್ನು ಹೇಳುವುದು ತುಂಬಾ ಕಷ್ಟವಾಗಿದ್ದು, ನಾವೆಲ್ಲರೂ ತುಂಬಾ ಶ್ರಮ ವಹಿಸಿ ಕೆಲಸ ಮಾಡಿದ್ದೇವೆ. ನಮ್ಮಂತೆಯೇ ಪ್ರೇಕ್ಷಕರು ಇದನ್ನು ಇಷ್ಟಪಡುತ್ತಾರೆ ಎಂದು ಭಾವಿಸುತ್ತೇವೆ’ ಎಂದು ನಿರ್ಮಾಪಕ ಸುಜೋಯ್‌ ಘೋಷ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT