ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ನಟ ಸೂರ್ಯನಿಗೆ ಶೂಟಿಂಗ್ ವೇಳೆ ಗಾಯ

Published 23 ನವೆಂಬರ್ 2023, 14:34 IST
Last Updated 23 ನವೆಂಬರ್ 2023, 14:34 IST
ಅಕ್ಷರ ಗಾತ್ರ

ಚೆನ್ನೈ: ಸಿನಿಮಾ ಶೂಟಿಂಗ್‌ ವೇಳೆ ತಮಿಳು ನಟ ಸೂರ್ಯನಿಗೆ ಗಾಯವಾಗಿದ್ದರಿಂದ ಚಿತ್ರೀಕರಣವನ್ನು ಕೆಲವು ದಿನಗಳವರೆಗೆ ಮುಂದೂಡಲಾಗಿದೆ.

‘ಕಂಗುವ‘ ಸಿನಿಮಾದ ಶೂಟಿಂಗ್‌ ವೇಳೆ ಈ ಅವಘಡ ಸಂಭವಿಸಿದೆ. ಕ್ಯಾಮೆರಾ ಸೂರ್ಯ ಅವರ ಭಜದ ಮೇಲೆ ಬಿದ್ದಿದ್ದರಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಚಿತ್ರತಂಡ ಹೇಳಿದೆ. 

ಫೈಟ್‌ ದೃಶವೊಂದನ್ನು ಶೂಟ್‌ ಮಾಡಲು ಕ್ಯಾಮೆರಾವನ್ನು ಮೇಲೆ ಕಟ್ಟಲಾಗಿತ್ತು. ಹಗ್ಗ ತುಂಡಾಗಿ ಕ್ಯಾಮೆರಾ ಸೂರ್ಯ ಅವರ ಭಜದ ಮೇಲೆ ಬಿದ್ದಿದೆ ಎಂದು ಚಿತ್ರತಂಡ ಹೇಳಿದೆ.

ಯಾರು ಆತಂಕ ಪಡುವ ಅಗತ್ಯವಿಲ್ಲ, ನಾನು ಆರೋಗ್ಯವಾಗಿದ್ದೇನೆ, ನನ್ನ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಸೂರ್ಯ ತಿಳಿಸಿದ್ದಾರೆ.

ಕಂಗುವ ಚಿತ್ರ ಭಾರಿ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದೆ. ಪುರಾತನ ಕಾಲದ ಫ್ಯಾಂಟಸಿ ಕಥಾ ಹಂದರ ಇರುವ ಈ ಸಿನಿಮಾವನ್ನು ಶಿವ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ದಿಶಾ ಪಟಾನಿ ಹಾಗೂ ಖಳನಾಯಕನಾಗಿ ಬಾಬಿ ಡಿಯೋಲ್ ಬಣ್ಣ ಹಚ್ಚಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT