ಶನಿವಾರ, ಆಗಸ್ಟ್ 13, 2022
23 °C

ಸುಶಾಂತ್ ಪ್ರಕರಣ: ಎನ್‌ಸಿಬಿ ಮುಂದೆ 3ನೇ ದಿನ ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಅವರು ಸತತ ಮೂರನೇ ದಿನ ಮಂಗಳವಾರ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಮುಂದೆ ವಿಚಾರಣೆಗೆ ಹಾಜರಾದರು.

ಡ್ರಗ್ಸ್‌  ಜಾಲದೊಂದಿಗಿನ ಸಂಪರ್ಕ ಕುರಿತು ಎನ್‌ಸಿಬಿ ಕಳೆದ ಎರಡು ದಿನಗಳಿಂದ ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಸಂಸ್ಥೆಯ ಕಚೇರಿಗೆ ರಿಯಾ ಬೆಳಿಗ್ಗೆ ಸುಮಾರು 10 ಗಂಟೆ ಹೊತ್ತಿಗೆ ಬಂದರು. ಪೊಲೀಸರು ಅವರಿಗೆ ರಕ್ಷಣೆಗೆ ಒದಗಿಸಿದ್ದರು. ರಿಯಾ ಅವರನ್ನು ಇ.ಡಿ. ಹಾಗೂ ಸಿಬಿಐ ಈಗಾಗಲೇ ವಿಚಾರಣೆ ನಡೆಸಿವೆ.

ಡ್ರಗ್ಸ್‌ಗೆ ಸಂಬಂಧಿಸಿದಂತೆ ರಿಯಾ ಅವರು ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿದ ದಾಖಲೆ ಹೊರಬಿದ್ದ ಬಳಿಕ ಈ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ... ರಿಯಾ ಚಕ್ರವರ್ತಿ ದೂರು; ಸುಶಾಂತ್ ‌ ಸಹೋದರಿಯರು ಮತ್ತು ವೈದ್ಯರ ವಿರುದ್ಧ ಎಫ್‌ಐಆರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು