ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ ‘ದಿಲ್ ಬೇಚಾರ’ ಸಿನಿಮಾದ ಟ್ರೇಲರ್ ಯೂಟ್ಯೂಬ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, ಟ್ರೆಂಡ್ ಹುಟ್ಟು ಹಾಕಿದೆ.

ಬಿಡುಗಡೆಯಾದ 24 ಗಂಟೆಯಲ್ಲಿ ಚಿತ್ರದ ಟ್ರೇಲರ್ ಯೂಟ್ಯೂಬ್ನಲ್ಲಿ 51 ಲಕ್ಷ ಲೈಕ್ಸ್ ಪಡೆದಿದೆ. ಆ ಮೂಲಕ ಹಾಲಿವುಡ್ ಆಲ್ಟೈಮ್ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಇನ್ಫಿನಿಟಿ ವಾರ್‘ ಮತ್ತು ‘ಎವೆಂಜರ್ಸ್ ಎಂಡ್ಗೇಮ್‘ ಸಿನಿಮಾ ಟ್ರೇಲರ್ಗಳು ನಿರ್ಮಿಸಿದ್ದ ದಾಖಲೆಗಳನ್ನು ಮುರಿದಿದೆ.

ಬಿಡುಗಡೆಯಾದ 24 ಗಂಟೆಯಲ್ಲಿ ಇನ್ಫಿನಿಟಿ ವಾರ್ ಟ್ರೇಲರ್ 32 ಲಕ್ಷ ಮತ್ತು ಎವೆಂಜರ್ಸ್ ಎಂಡ್ಗೇಮ್ 29 ಲಕ್ಷ ಲೈಕ್ಸ್ ಪಡೆದಿದ್ದವು. ಇಲ್ಲಿಯವರೆಗೆಎವೆಂಜರ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ‘ದಿಲ್ ಬೇಚಾರ’ ಮುರಿದಿದೆ.

‘ದಿಲ್ ಬೇಚಾರ’ ಟ್ರೇಲರ್ ಇದೇ ಸೋಮವಾರ (ಜುಲೈ 6) ಯೂಟ್ಯೂಬ್ನಲ್ಲಿ ಫಾಕ್ಸ್ ಸ್ಟಾರ್ ಹಿಂದಿ ಚಾನೆಲ್ ಮೂಲಕ ಬಿಡುಗಡೆಯಾಗಿತ್ತು. ಇಲ್ಲಿಯವರೆಗೆಟ್ರೇಲರ್ 4.40 ಕೋಟಿ ವೀಕ್ಷಣೆ ಮತ್ತು 79 ಲಕ್ಷ ಲೈಕ್ಸ್ನೊಂದಿಗೆ ಹೊಸ ಟ್ರೆಂಡ್ ಹುಟ್ಟು ಹಾಕಿದೆ.

‘ದಿಲ್ ಬೇಚಾರ’ ಟ್ರೇಲರ್ ಬಿಡುಗಡೆಯಾದ 16 ಗಂಟೆಗಳಲ್ಲಿ 21 ಲಕ್ಷ ವೀಕ್ಷಣೆ ಪಡೆದಿತ್ತು.ಸುಶಾಂತ್ ಮತ್ತು ಸಂಜನಾ ಸಾಂಘಿ ನಟಿಸಿರುವ ಈ ಚಿತ್ರ ಜುಲೈ 24ರಂದು ಸಿನಿಮಾ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ.

ಹಾಲಿವುಡ್ ರಿಮೇಕ್

‘ದಿಲ್ ಬೇಚಾರ’ ಸಿನಿಮಾ, 2014ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್ನ ‘ದ ಫಾಲ್ಟ್ ಇನ್ ಅವರ್ ಸ್ಟಾರ್ಸ್’ ರಿಮೇಕ್. ಜಾನ್ ಗ್ರೀನ್ ಅವರ ಪ್ರಸಿದ್ಧ ಕಾದಂಬರಿ ಆಧರಿಸಿ ತೆಗೆದ ಚಿತ್ರ. ಕಾದಂಬರಿಯ ಮೂಲ ಹೆಸರನ್ನೇ ಚಿತ್ರಕ್ಕೂ ಉಳಿಸಿಕೊಳ್ಳಲಾಗಿತ್ತು. ನಟಿ ಶೈಲೀನ್ ವೂಡ್ಲಿ ಅಭಿನಯಿಸಿದ್ದ ಹಾಲಿವುಡ್ ಚಿತ್ರ ‘ದ ಫಾಲ್ಟ್ ಇನ್ ಅವರ್ ಸ್ಟಾರ್ಸ್’ ಬಾಕ್ಸ್ ಆಫೀಸ್ನಲ್ಲಿ 2,100 ಕೋಟಿ ರೂಪಾಯಿ ಬಾಚಿಕೊಂಡಿತ್ತು.

ಸುಶಾಂತ್ ಪರ ಅನುಕಂಪ

‘ದಿಲ್ ಬೇಚಾರ’ ಯುವ ಪ್ರೇಮಿಗಳಿಬ್ಬರ ದುರಂತ ಪ್ರೇಮ್ ಕಹಾನಿ. ಸುಶಾಂತ್ ಮತ್ತು ಸಂಜನಾ ಸಾಂಘಿ ಜತೆ ಸಾರಾ ಅಲಿ ಖಾನ್ ನಟಿಸಿದ್ದಾರೆ. ಅಮಿತಾಭ್ ಬಟ್ಟಾಚಾರ್ಯ ಸಾಹಿತ್ಯ ಮತ್ತು ಎ.ಆರ್. ರೆಹಮಾನ್ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್.

ಜೂನ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ನಂತರ ದೇಶದಾದ್ಯಂತ ಅವರ ಪರ ಅನುಕಂಪದ ಅಲೆ ಎದ್ದಿದೆ. ಅಷ್ಟೇ ಅಲ್ಲ, ಸುಶಾಂತ್ ಆತ್ಮಹತ್ಯೆ ಬಾಲಿವುಡ್ನ ಮತ್ತೊಂದು ಕರಾಳ ಮುಖವನ್ನು ಬಯಲು ಮಾಡುತ್ತಿದೆ.

ಕಿಜಿ ಔರ್ ಮ್ಯಾನಿ

‘ದಿಲ್ ಬೇಚಾರ’ ಚಿತ್ರಕ್ಕೆ ಮೊದಲು ‘ಕಿಜಿ ಔರ್ ಮ್ಯಾನಿ’ ಎಂಬ ಹೆಸರಿಡಲಾಗಿತ್ತು. ಈ ಚಿತ್ರದ ನಾಯಕ ಮತ್ತು ನಾಯಕಿ ಪಾತ್ರಧಾರಿಗಳ ಹೆಸರು ಮ್ಯಾನಿ ಮತ್ತು ಕಿಜಿ.

ಕಳೆದ ವರ್ಷ ನವೆಂಬರ್ನಲ್ಲಿಯೇ ‘ದಿಲ್ ಬೇಚಾರ’ ತೆರೆ ಕಾಣಬೇಕಿತ್ತು. ಅದಾದ ನಂತರ ಹಲವಾರು ಬಾರಿ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು.ಮಾರ್ಚ್ನಲ್ಲಿ ನಿಗದಿಯಾಗಿದ್ದ ಚಿತ್ರದ ಬಿಡುಗಡೆ ದಿನಾಂಕ ಕೊರೊನಾ ಲಾಕ್ಡೌನ್ನಿಂದ ಮತ್ತೆ ಮುಂದೂಲ್ಪಟ್ಟಿತು. ಕೊನೆಗೂ ಜುಲೈ 24ರಂದು ಆನ್ಲೈನ್ನಲ್ಲಿ ಈ ಸಿನಿಮಾ ಬಿಡುಗಡೆಯ ಭಾಗ್ಯ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.