ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್ ಸಿಂಗ್ ರಜಪೂತ್ ಕೊನೆ ಚಿತ್ರ ‘ದಿಲ್‌ ಬೇಚಾರ’ ಇಂದು ಸಂಜೆ ಬಿಡುಗಡೆ

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯಲ್ಲಿ ಬಿಡುಗಡೆ
Last Updated 24 ಜುಲೈ 2020, 10:22 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್ ಅಭಿನಯದ ಕೊನೆಯ ಹಾಗೂ ಬಹುನಿರೀಕ್ಷಿತ ಸಿನಿಮಾ ‘ದಿಲ್‌ ಬೇಚಾರ’ ಇಂದು (ಜುಲೈ 24) ಸಂಜೆ 7.30ಕ್ಕೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಒಟಿಟಿ ಚಾನೆಲ್‌ನಲ್ಲಿ ಬಿಡುಗಡೆಯಾಗುತ್ತಿದೆ.

ಈ ಬಗ್ಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಒಟಿಟಿ ತನ್ನ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಜತೆಗೆ, ಇತ್ತೀಚೆಗೆ ಬಿಡುಗಡೆಯಾದ ಸಿನಿಮಾದ ಟ್ರೇಲರ್‌ ದೃಶ್ಯಗಳ ಲಿಂಕ್‌ ಹಂಚಿಕೊಂಡಿದೆ.

ಹಾಟ್‌ಸ್ಟಾರ್‌ ಚಂದಾದಾರರಲ್ಲದವರೂ ಈ ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಆ ಮೂಲಕ ಖ್ಯಾತ ನಟನೊಬ್ಬನಿಗೆ ಗೌರವ ಸಲ್ಲಿಸುತ್ತಿರುವುದಾಗಿ ಈ ಹಿಂದೆ ಸಂಸ್ಥೆಯ ಮುಖ್ಯಸ್ಥರು ಹೇಳಿಕೊಂಡಿದ್ದರು. ಅದರಂತೆ, ಚಂದಾದಾರರಲ್ಲದವರು ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಬಹುದು.

ಮುಖೇಶ್ ಛಾಬ್ರಾ ನಿರ್ದೇಶನದ ಮೊದಲ ಚಿತ್ರ ಇದು. ಈ ಸಿನಿಮಾವನ್ನು ‘ಫಾಕ್ಸ್‌ ಸ್ಟಾರ್ ಸ್ಟುಡಿಯೊ‌’ ನಿರ್ಮಾಣ ಮಾಡಿದೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಜುಲೈ 5ರಂದು ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿತ್ತು. ಬಿಡುಗಡೆಯಾದ ಅರ್ಧಗಂಟೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ಸಿನಿಮಾ ಬಿಡುಗಡೆಯಾಗುವ ಈ ಹಂತದಲ್ಲಿ ಟ್ರೇಲರ್ ವೀಕ್ಷಕರ ಸಂಖ್ಯೆ ಕೋಟಿಗಳಲ್ಲಿದೆ.

ಸುಶಾಂತ್‌ ಸಿಂಗ್‌ ಜೋಡಿಯಾಗಿ ಸಂಜನಾ ಸಾಂಘಿ ಅಭಿನಯಿಸಿದ್ದಾರೆ. ಸಂಜನಾಗೆ ಇದು ಮೊದಲ ಚಿತ್ರ. ಇದು ಸಾಮಾನ್ಯ ಜನರ ಅಸಮಾನ್ಯ ಪ್ರೇಮಕತೆ. ದುರಂತ ಪ್ರೇಮಕತೆಯೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT