ನವದೆಹಲಿ: ‘ಮದುವೆಯಾಗಿಲ್ಲ, ಷರತ್ತುರಹಿತವಾದ ಪ್ರೇಮದಿಂದ ಆವರಿಸಲ್ಪಟ್ಟಿದ್ದೇನೆ’.

ಹೀಗೆಂದಿದ್ದು ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೂವಾರಿ ಮತ್ತು ಮೊದಲ ಅಧ್ಯಕ್ಷ ಲಲಿತ್ ಕುಮಾರ್ ಮೋದಿ ಜತೆ ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿದ್ದು, ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳ ಕುರಿತು ಸಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ.

ವಿಕ್ರಮ್ ಭಟ್ರಿಂದ ಲಲಿತ್ ಮೋದಿವರೆಗೆ.. ಸುಶ್ಮಿತಾರ 10 ಪ್ರೇಮ ಸಂಬಂಧಗಳು

‘ನಾನೀಗ ಸಂತಸ ಭರಿತ ಜಾಗದಲ್ಲಿದ್ದೇನೆ! ಮದುವೆಯಾಗಿಲ್ಲ, ನಿಶ್ಚಯವೂ ಆಗಿಲ್ಲ. ಷರತ್ತುರಹಿತವಾದ ಪ್ರೇಮದಿಂದ ಆವರಿಸಲ್ಪಟ್ಟಿದ್ದೇನೆ. ಇಷ್ಟು ಸ್ಪಷ್ಟನೆ ಸಾಕು ಅಂದುಕೊಳ್ಳುತ್ತೇನೆ. ನೀವು ಕೆಲಸಕ್ಕೆ ಮರಳಿ! ನನ್ನ ಸಂತಸದಲ್ಲಿ ಯಾವಾಗಲೂ ಭಾಗಿಯಾದವರಿಗೆ ಧನ್ಯವಾದಗಳು. ಆಗಿಲ್ಲದವರಿಗೆ ಸಂಬಂಧಪಟ್ಟ ವಿಷಯ ಇದಲ್ಲ. ನಿಮ್ಮ ಮೇಲೆ ಪ್ರೀತಿಯಿದೆ’ ಎಂದು 46 ವರ್ಷದ ಸುಶ್ಮಿತಾ ಇನ್ಸ್ಟಾಗ್ರಾಂ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಗುರುವಾರ ಟ್ವೀಟ್ ಮಾಡಿದ್ದ ಲಲಿತ್ ಮೋದಿ, ‘ಇವಾಗ ತಾನೇ ಮಾಲ್ಡೀವ್ಸ್ಪ್ರವಾಸ ಮುಗಿಸಿ ಲಂಡನ್ಗೆ ಬಂದೆ, ಇಗೋ ನಿಮಗೆ ಈ ವಿಷಯ ತಿಳಿಸುತ್ತಿದ್ದೇನೆ. ಇದು ನನ್ನ ಹೊಸ ಜೀವನ, ಇಲ್ಲಿಂದ ಹೊಸ ಬಾಳ ಪಯಣ, ನನ್ನ ಬಾಳಲ್ಲಿ ಬಂದ ಪೂರ್ಣಚಂದಿರ’ ಎಂದು ಟ್ವೀಟ್ ಮಾಡಿ ಸುಶ್ಮಿತಾ ಜೊತೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದರು.

ಮುಂದುವರಿದು, ‘ಸದ್ಯ ನಾವಿಬ್ಬರೂ ಡೇಟಿಂಗ್ನಲ್ಲಿ ಮಾತ್ರ ಇದ್ದೇವೆ. ಮದುವೆ ಕೂಡ ಆಗಲಿದ್ದೇವೆ, ಆ ದಿನ ಮುಂದೆ ಬರಲಿದೆ’ ಎಂದು ಟ್ವೀಟ್ನಲ್ಲಿ ತಿಳಿಸಿದ್ದರು.

ಐಪಿಎಲ್ ಮಾಜಿ ಬಾಸ್ ಲಲಿತ್ ಮೋದಿ ನಟಿ ಸುಶ್ಮಿತಾ ಸೇನ್ ಜೊತೆ ಡೇಟಿಂಗ್ನಲ್ಲಿ!

ಭಾರತದಲ್ಲಿ ಐಪಿಎಲ್ ಹುಟ್ಟುಹಾಕಿದ್ದ ಉದ್ಯಮಿಯಾಗಿರುವ ಲಲಿತ್ ಮೋದಿ ತೆರಿಗೆ ವಂಚನೆ ಪ್ರಕರಣದಲ್ಲಿ ಭಾರತ ತೊರೆದು ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.