ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಕ್ರಮ್ ಭಟ್‌ರಿಂದ ಲಲಿತ್ ಮೋದಿವರೆಗೆ... ಸುಶ್ಮಿತಾರ 10 ಪ್ರೇಮ ಸಂಬಂಧಗಳು

Last Updated 15 ಜುಲೈ 2022, 14:29 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್‌ನ ಸಿಂಗಲ್ ಮದರ್ ಹಾಗೂ ಗ್ಲಾಮರ್‌ ನಡೆ ನುಡಿಗೆ ಹೆಸರಾದ, ಮಾಜಿ ಭುವನ ಸುಂದರಿ 46 ವರ್ಷದ ಸುಶ್ಮಿತಾ ಸೇನ್ ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಹೌದು ಇದಕ್ಕೆ ಕಾರಣ, ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್) ರೂವಾರಿ ಮತ್ತು ಐಪಿಎಲ್‌ ಮೊದಲ ಅಧ್ಯಕ್ಷ ಲಲಿತ್ ಕುಮಾರ್‌ ಮೋದಿ ಅವರೊಂದಿಗೆ ಡೇಟಿಂಗ್‌ ನಡೆಸುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿವೈರಲ್‌ ಆಗಿದೆ.

18ನೇ ವಯಸ್ಸಿನಲ್ಲೇ ಸುಶ್ಮಿತಾ ಸೇನ್​ ಅವರು ಮಿಸ್​ ಯೂನಿವರ್ಸ್​ ಮತ್ತು ಮಿಸ್​ ಇಂಡಿಯಾ ಕಿರೀಟ ಪಡೆದು ಬೀಗಿದ್ದರು. ಬಳಿಕ ಅವರು ಚಿತ್ರರಂಗದತ್ತ ಮುಖ ಮಾಡಿದ್ದಾರೆ. 2000ರಲ್ಲಿ ಮದುವೆ ಆಗದೇ ಹೆಣ್ಣು ಮಗುವನ್ನು ದತ್ತು ಪಡೆದ ಸುಶ್ಮಿತಾ ಅವರ ನಡೆ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಸುಶ್ಮಿತಾ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. 2010ರಲ್ಲಿ ಮತ್ತೊಂದು ಹೆಣ್ಣು ಮಗುವನ್ನು ದತ್ತು ಪಡೆದಿದ್ದಾರೆ.

ಸುಶ್ಮಿತಾ ಸೇನ್​ ಅವರು ಈವರೆಗೆ ಮದುವೆಯಾಗಿಲ್ಲ. 2018ರಿಂದ 2022 ರವರೆಗೆ ರೋಹ್ಮಾನ್ ಶಾವ್ಲ್ ಜತೆ ಸಹಜೀವನ (ಲಿವಿಂಗ್‌ ಟುಗೆದರ್‌) ನಡೆಸುತ್ತಿದ್ದರು. ಆದರೆ, ಇತ್ತೀಚೆಗಷ್ಟೇ ರೋಹ್ಮಲ್‌ –ಸುಶ್ಮಿತಾ ನಡುವೆ ಬ್ರೇಕಪ್​ ಆಗಿದೆಯಂತೆ.

ಇದೀಗ ಐಪಿಎಲ್​ ಮಾಜಿ ಅಧ್ಯಕ್ಷ 56 ವರ್ಷದ ಲಲಿತ್​ ಮೋದಿ ಅವರೊಂದಿಗೆ ಸುಶ್ಮಿತಾ ಡೇಟಿಂಗ್​ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಶೀಘ್ರದಲ್ಲೇ ಅವರು ಮದುವೆಯಾಗಲಿದ್ದಾರೆ ಎಂಬ ವದಂತಿಯೂ ಹರಿದಾಡುತ್ತಿದೆ.

ಇದರೊಂದಿಗೆ ಲಲಿತ್ ಮೋದಿ, ಸುಶ್ಮಿತಾ ಸೇನ್‌ ಅವರೊಂದಿಗೆ ಡೇಟಿಂಗ್ ನಡೆಸುತ್ತಿರುವ ಹತ್ತನೇ ವ್ಯಕ್ತಿ ಎನಿಸಿದ್ದಾರೆ.

ಸುಶ್ಮಿತಾ ಜತೆ ಸಹಜೀವನ ನಡೆಸಿದ ವ್ಯಕ್ತಿಗಳ ಪಟ್ಟಿ ಇಂತಿದೆ...

1) ವಿಕ್ರಮ್ ಭಟ್ (ನಿರ್ದೇಶಕ)

2. ರಣದೀಪ್ ಹೂಡಾ (ಬಾಲಿವುಡ್ ನಟ)

3. ಬಂಟಿ ಸಚ್‌ದೇವ್ (ಉದ್ಯಮಿ)

4. ಇಮ್ತಿಯಾಜ್ ಖತ್ರಿ (ಚಿತ್ರ ನಿರ್ಮಾಪಕ)

5. ಮುದಸ್ಸರ್‌ ಅಜೀಜ್‌ (ನಿರ್ದೇಶಕ)

6. ಸಬೀರ್ ಭಾಟಿಯಾ (ಉದ್ಯಮಿ)

7. ಸಂಜಯ್ ನಾರಂಗ್ (ಹೋಟೆಲ್ ಉದ್ಯಮಿ)

8. ರಿತಿಕ್ ಭಾಸಿನ್ (ಉದ್ಯಮಿ)

9. ರೋಹ್ಮಾನ್ ಶಾವ್ಲ್ (ಮಾಡೆಲ್)

10. ಲಲಿತ್ ಮೋದಿ (ಉದ್ಯಮಿ)

1) ವಿಕ್ರಮ್ ಭಟ್ – ಸುಶ್ಮಿತಾ ‘ಲಿವಿಂಗ್‌ ಟುಗೆದರ್‌’
‘ದಸ್ತಕ್​’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ವಿಕ್ರಮ್ ಭಟ್ ಅವರೊಂದಿಗೆ ಸುಶ್ಮಿತಾ ಸೇನ್ ಸಹಜೀವನ ನಡೆಸಲು ಆರಂಭಿಸಿದ್ದರು. ಆದಾಗಲೇ ವಿಕ್ರಮ್ ಭಟ್ ಬೇರೊಬ್ಬ ಮಹಿಳೆಯೊಂದಿಗೆ ಮದುವೆಯಾಗಿದ್ದರು. ಹಾಗಾಗಿ ವಿಕ್ರಮ್ ಭಟ್ – ಸುಶ್ಮಿತಾ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ.

2) ರಣದೀಪ್ ಹೂಡಾ
ಬಾಲಿವುಡ್ ನಟ ರಣದೀಪ್ ಹೂಡಾ ಅವರೊಂದಿಗೆ ಸುಶ್ಮಿತಾ ಸೇನ್ ಮೂರು ವರ್ಷಗಳ ಕಾಲ ಸಹಜೀವನ ನಡೆಸಿದ್ದರು.

3) ಬಂಟಿ ಸಚ್‌ದೇವ್
ಉದ್ಯಮಿ ಬಂಟಿ ಸಚ್‌ದೇವ್ ಕಾರ್ನರ್‌ಸ್ಟೋನ್ ಎಂಬ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮುಖ್ಯಸ್ಥರಾಗಿದ್ದಾರೆ. ಅವರೊಂದಿಗೂ ಸುಶ್ಮಿತಾ ಕೆಲಕಾಲ ಸಹಜೀವನ ನಡೆಸಿದ್ದರು.

4) ಇಮ್ತಿಯಾಜ್ ಖತ್ರಿ
ಸುಶ್ಮಿತಾ ಅವರಿಗೆ 36 ವರ್ಷ ವಯಸ್ಸಾಗಿದ್ದಾಗ, ಅವರು ಉದ್ಯಮಿ ಇಮ್ತಿಯಾಜ್ ಖತ್ರಿ ಅವರೊಂದಿಗೆ ಸಹಜೀವನ ನಡೆಸಿದ್ದರು. ಗೋವಾದಲ್ಲಿ ನಡೆದ ಫ್ಯಾಷನ್ ಷೋ ಇಬ್ಬರ ನಡುವೆ ಸ್ನೇಹಕ್ಕೆ ಕಾರಣವಾಗಿತ್ತು.

5) ಮುದಸ್ಸರ್‌ ಅಜೀಜ್‌
‘ದುಲ್ಹಾ ಮಿಲ್ ಗಯಾ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ಮುದಸ್ಸರ್ ಅಜೀಜ್ ಅವರೊಂದಿಗೆ ಸುಶ್ಮಿತಾ ಪ್ರೀತಿಯಲ್ಲಿದ್ದರು. ಕ್ರಮೇಣ ಇಬ್ಬರ ನಡುವಣ ಪ್ರೀತಿ ಸಹಜೀವನಕ್ಕೆ ಸಾಕ್ಷಿಯಾಗಿತ್ತು.

6) ಸಬೀರ್ ಭಾಟಿಯಾ
ಹಾಟ್‌ಮೇಲ್‌ನ ಸಂಸ್ಥಾಪಕ ಸಬೀರ್ ಭಾಟಿಯಾ ಅವರು ಸುಶ್ಮಿತಾ ಸೇನ್‌ ಜತೆ ಕೆಲಕಾಲ ಪ್ರೀತಿಯಲ್ಲಿದ್ದರು. ಭಾಟಿಯಾ, ಸುಶ್ಮಿತಾಗೆ ವಜ್ರದ ಉಡುಗೊರೆಯನ್ನು ನೀಡುವ ಮೂಲಕ ಸಹಜೀವನ ನಡೆಸುತ್ತಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.

7) ಸಂಜಯ್ ನಾರಂಗ್
ಹೋಟೆಲ್ ಉದ್ಯಮಿ ಸಂಜಯ್ ನಾರಂಗ್ ಅವರೊಂದಿಗೆ ಸುಶ್ಮಿತಾ ಸೇನ್ ಕೆಲಕಾಲ ಸಂಬಂಧ ಹೊಂದಿದ್ದರು.

8) ರಿತಿಕ್ ಭಾಸಿನ್
ಸುಶ್ಮಿತಾ ಸೇನ್ ಅವರೊಂದಿಗೆ ಸಹಜೀವನ ನಡೆಸಿದವರಲ್ಲಿ ಹೋಟೆಲ್ ಉದ್ಯಮಿ, ರಿತಿಕ್ ಭಾಸಿನ್ ಕೂಡ ಒಬ್ಬರು. ವರದಿಗಳ ಪ್ರಕಾರ ಸುಶ್ಮಿತಾ ರಿತಿಕ್ ನಾಲ್ಕು ವರ್ಷಗಳ ಕಾಲ ಸಹಜೀವನ ನಡೆಸಿದ್ದರು. ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಸಾಗರಿಕಾ ಅವರ ವಿವಾಹ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು.

9) ರೋಹ್ಮಾನ್ ಶಾವ್ಲ್
2018ರಿಂದ ಸುಶ್ಮಿತಾ ಸೇನ್ ತನಗಿಂತ 15 ವರ್ಷ ಚಿಕ್ಕವನಾದ ನೋಯ್ಡಾ ಮೂಲದ ಮಾಡೆಲ್ ರೋಹ್ಮನ್ ಶಾವ್ಲ್ ಜತೆ ಸಹಜೀವನ ನಡೆಸುತ್ತಿದ್ದರು. ಆದರೆ, ಇತ್ತೀಚೆಗಷ್ಟೇ ರೋಹ್ಮಲ್‌ –ಸುಶ್ಮಿತಾ ನಡುವೆ ಬ್ರೇಕಪ್​ ಆಗಿದೆ.

10) ಲಲಿತ್ ಮೋದಿ –ಸುಶ್ಮಿತಾ
ಐಪಿಎಲ್ ರೂವಾರಿ ಮತ್ತು ಐಪಿಎಲ್‌ ಮೊದಲ ಅಧ್ಯಕ್ಷ ಲಲಿತ್ ಕುಮಾರ್‌ ಮೋದಿ ಅವರೊಂದಿಗೆ ಸುಶ್ಮಿತಾ ಸೇನ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡುತ್ತಿದೆ.

‘ಇದು ಹೊಸ ಆರಂಭ, ಕೊನೆಗೂ ನವ ಜೀವನ ಶುರುವಾಗಿದೆ. ಮಿಸ್‌ ಸೇನ್‌ ಒಳ್ಳೆಯ ಅರ್ಧಾಂಗಿ’ ಎಂದು ಬಣ್ಣಿಸಿರುವ ಲಲಿತ್ ಕುಮಾರ್‌ ಮೋದಿ, ನಟಿಯ ಜತೆಗಿನ ಆಪ್ತತೆಯ ಕ್ಷಣಗಳ ಚಿತ್ರಗಳನ್ನು ಗುರುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಸಾರ್ಡಿನಿಯಾ ಜತೆಗೆ ಕುಟುಂಬದೊಂದಿಗೆ ವಿಶ್ವ ಪ್ರವಾಸ ಮುಗಿಸಿ ಈಗಷ್ಟೇ ಲಂಡನ್‌ಗೆ ಹಿಂತಿರುಗಿರುವೆ. ಸೇನ್‌ ಜತೆಗೆ ಹೊಸ ಜೀವನ ಶುರುವಾಗಿದೆ. ಸದ್ಯ ಇಬ್ಬರೂ ಡೇಟಿಂಗ್‌ನಲ್ಲಿದ್ದೇವೆ. ನಾವು ಸದ್ಯಕ್ಕೆ ಮದುವೆಯಾಗಿಲ್ಲ. ಮುಂದೆ ಅದೂ ಆಗಬಹುದು’ ಎಂದು ಟ್ವೀಟ್‌ನಲ್ಲಿ ಮೋದಿ ಹೇಳಿಕೊಂಡಿದ್ದಾರೆ.

ಸುಶ್ಮಿತಾ ಅವರ ಸಿನಿ ಪಯಣ: ಸುಶ್ಮಿತಾ ಸೇನ್​ ನಟಿಸಿದ ಮೊದಲ ಸಿನಿಮಾ ‘ದಸ್ತಕ್​’. ನಾಯಕಿಯಾಗಿ ನಟಿಸುವುದರ ಜೊತೆಗೆ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮನ ಗೆದ್ದರು. ‘ಬೀವಿ ನಂ.1’, ‘ಮೈ ಹೂ ನಾ’, ‘ಮೈ ನೇ ಪ್ಯಾರ್​ ಕ್ಯೂ ಕಿಯಾ’ ಮುಂತಾದವು ಸುಶ್ಮಿತಾ ಸೇನ್​ ಅವರು ಪ್ರಮುಖ ಸಿನಿಮಾಗಳು. ಇತ್ತೀಚೆಗೆ ಅವರು ‘ಆರ್ಯ’ ವೆಬ್​ ಸೀರಿಸ್​ನಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT