ಸೋಮವಾರ, ಆಗಸ್ಟ್ 19, 2019
23 °C

42ರ ಸುಶ್ಮಿತಾ ಸೇನ್‌ 28ರ ಹರೆಯದ ರೋಹ್ಮಾನ್ ಜತೆ ಮದುವೆ!

Published:
Updated:
Prajavani

ಸುಶ್ಮಿತಾ ಸೇನ್‌ ಅವರ ಗೆಳೆಯ ರೋಹ್ಮಾನ್ ಶಾಲ್ ಜೊತೆ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ. 

ಮಾಜಿ ವಿಶ್ವಸುಂದರಿ ಕಳೆದ ಎರಡು ವರ್ಷದಿಂದ ರೂಪದರ್ಶಿ ರೋಹ್ಮಾನ್ ಶಾಲ್ ಜೊತೆ ಡೇಟಿಂಗ್‌ನಲ್ಲಿದ್ದಾರೆ. ಈಗ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. 

ತಮ್ಮ ಸಹೋದರ ರಾಜೀವ್‌ ಸೇನ್‌ ಅವರ ವಿವಾಹವಾದ ಬಳಿಕ ತಾವೂ ಮದುವೆಯಾಗಲು ಸುಶ್ಮಿತಾ ನಿರ್ಧರಿಸಿದ್ದಾರೆ. ಈಗಾಗಲೇ ಈ ಜೋಡಿ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಮಾತುಗಳು ಇದೀಗ ಎಲ್ಲೆಡೆ ಕೇಳಿಬರುತ್ತಿದೆ. 

ಸುಶ್ಮಿತಾ ಸೇನ್‌ಗೆ ಈಗ 42 ವರ್ಷ. ರೋಹ್ಮಾನ್ 28 ವರ್ಷದ ಯುವಕ.

Post Comments (+)