ಗುರುವಾರ , ಜನವರಿ 27, 2022
21 °C

ಹೃತಿಕ್ ರೋಷನ್‌ಗೆ ದೊಡ್ಡ ಅಪ್ಪುಗೆ; ಅದ್ಭುತ ತಂದೆ ಎಂದು ಶುಭಕೋರಿದ ಮಾಜಿ ಪತ್ನಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಹೃತಿಕ್‌ ರೋಷನ್ ಹಾಗೂ ಸುಸಾನೆ ಖಾನ್ ಈಗಾಗಲೇ ವಿಚ್ಛೇದನ ಪಡೆದಿದ್ದಾರೆ. ಆದರೆ, ತಮ್ಮ ಮಕ್ಕಳಾದ ರಿದಾನ್ ಮತ್ತು ರೆಹಾನ್ ಅವರಿಗಾಗಿ ಸಹ-ಪೋಷಕರಾಗಿ ಮುಂದುವರಿಯುತ್ತಿದ್ದಾರೆ. ಇಂದು ನಟ ಹೃತಿಕ್ ರೋಷನ್ ಅವರ 48ನೇ ಹುಟ್ಟುಹಬ್ಬದ ಅಂಗವಾಗಿ ಸುಸಾನೆ ಅವರು ಇನ್‌ಸ್ಟಾಗ್ರಾಂನಲ್ಲಿ ಶುಭಕೋರಿದ್ದಾರೆ. ಅಲ್ಲದೆ, ಹೃತಿಕ್ ಮತ್ತು ಅವರ ಪುತ್ರರನ್ನು ಒಳಗೊಂಡ ವಿಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

ಹೃತಿಕ್ ರೋಷನ್ ಮತ್ತು ಸುಸಾನೆ ಖಾನ್ ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಸಂದೇಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೃತಿಕ್ ಅವರ ವಿಶೇಷ ದಿನದಂದು, ಸುಸಾನೆ ರಿದಾನ್ ಮತ್ತು ರೆಹಾನ್ ಜೊತೆಗಿರುವ ನಟನ ವಿಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

'ಹ್ಯಾಪಿ ಹುಟ್ಟುಹಬ್ಬದ ಶುಭಾಶಯಗಳು. ನೀವೊಬ್ಬರು ಅದ್ಭುತ ತಂದೆ... ನಿಮ್ಮನ್ನು ತಂದೆಯಾಗಿ ಪಡೆದಿರುವ ರಿದಾನ್ ಮತ್ತು ರೆಹಾನ್ ತುಂಬಾ ಅದೃಷ್ಟವಂತರು... ನಿಮ್ಮ ಎಲ್ಲಾ ಕನಸುಗಳು ಮತ್ತು ಆಶಯಗಳು ಇಂದು ನನಸಾಗಲಿ ಮತ್ತು ಯಾವಾಗಲೂ ನಿಮಗೆ ಅಪ್ಪುಗೆ! #fathersongoals' ಎಂದು ಸುಸಾನೆ ಪೋಸ್ಟ್ ಮಾಡಿದ್ದಾರೆ.

ಹೃತಿಕ್ ಮತ್ತು ಸುಸಾನೆ 2000 ರಲ್ಲಿ ವಿವಾಹವಾಗಿದ್ದರು. 2006 ರಲ್ಲಿ ರೆಹಾನ್ ಮತ್ತು 2008 ರಲ್ಲಿ ರಿದಾನ್ ಎಂಬ ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, 14 ವರ್ಷಗಳ ದಾಂಪತ್ಯ 2014ರಲ್ಲಿ ಮುರಿದುಬಿತ್ತು. ವಿಚ್ಛೇದನದ ನಂತರವೂ ಸುಸಾನೆ ಅವರೊಡನೆ ಹೃತಿಕ್ ಗೆಳೆತನ ಉಳಿಸಿಕೊಂಡಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಚಿತ್ರಗಳನ್ನು ಮತ್ತು ಭಾವನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ್ಗೆ ಪರಸ್ಪರರ ಪೋಸ್ಟ್‌ಗಳಲ್ಲಿ ಕಾಮೆಂಟ್‌ಗಳನ್ನು ಸಹ ಮಾಡುತ್ತಿರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು