ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಲೈಂಗಿಕ ಜೀವನ ಆಸಕ್ತಿದಾಯಕವಾಗಿಲ್ಲದ ಕಾರಣ ಕರಣ್​ ನನ್ನ ಕರೆಯಲ್ಲ: ತಾಪ್ಸಿ 

ಕರಣ್​ ಜೋಹರ್ ಅವರ ‘ಕಾಫಿ ವಿತ್​ ಕರಣ್​ ಸೀಸನ್​ 7’ ಕಾರ್ಯಕ್ರಮದ ಬಗ್ಗೆ ನಟಿಯ ಮಾತು
Last Updated 8 ಆಗಸ್ಟ್ 2022, 7:57 IST
ಅಕ್ಷರ ಗಾತ್ರ

ಮುಂಬೈ: ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್ ಸೀಸನ್ 7’ ಕಾರ್ಯಕ್ರಮದ ಬಗ್ಗೆಬಾಲಿವುಡ್‌ ನಟಿ ತಾಪ್ಸಿ ಪನ್ನು ಮಾತನಾಡಿದ್ದಾರೆ.

ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ತಾಪ್ಸಿ, ಕಾರ್ಯಕ್ರಮಕ್ಕೆ ಈ ಬಾರಿ ಯಾಕೆ ಆಹ್ವಾನಿಸಲಾಗಿಲ್ಲ ಎಂಬುದರ ಬಗ್ಗೆ ಹೇಳಿದ್ದಾರೆ.

ತಾಪ್ಸಿ ಪನ್ನು ನಟಿಸಿರುವ ‘ದೋಬಾರಾ’ ಹಿಂದಿ ಸಿನಿಮಾ ಆಗಸ್ಟ್ 19ರಂದು ಬಿಡುಗಡೆಯಾಗಲಿದೆ. ದೇಶದ ಹಲವು ನಗರಗಳಲ್ಲಿ ಸಿನಿಮಾದ ಪ್ರಚಾರ ಕಾರ್ಯ ಮಾಡುತ್ತಿರುವ ತಾಪ್ಸಿ, ಕರುಣ್‌ ಜೋಹರ್‌ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ.

‘ನನ್ನ ಲೈಂಗಿಕ ಜೀವನ ಅಷ್ಟೊಂದು ಆಸಕ್ತಿದಾಯಕವಾಗಿಲ್ಲದ ಕಾರಣ ಕರಣ್ ಜೋಹರ್ ಅವರು ನನ್ನನ್ನು ಈ ಕಾರ್ಯಕ್ರಮಕ್ಕೆ ಕರೆದಿಲ್ಲ ಎಂದು ಹೇಳಿದ್ದಾರೆ.

ಕರಣ್‌ ಜೋಹರ್‌ ನಡೆಸಿಕೊಡುವ‘ಕಾಫಿ ವಿತ್ ಕರಣ್’ ಇದೇ ಮೊದಲ ಬಾರಿಗೆ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಕರಣ್‌ ಅವರ ನೇರವಾದ, ಬೋಲ್ಡ್‌ ಪ್ರಶ್ನೆಗಳಿಗೆ ಸೆಲೆಬ್ರಿಟಿಗಳು ಕಕ್ಕಾಬಿಕ್ಕಿಯಾಗಿದ್ದು ಉಂಟು. ಲೈಂಗಿಕ ಜೀವನ, ವಿವಾದಗಳು, ಗಾಸಿಫ್‌ಗಳು, ಬ್ರೇಕಪ್‌ ಸೇರಿದಂತೆ ವಿವಿಧ ಪ್ರಶ್ನೆಗಳನ್ನು ಕೇಳುವ ಮೂಲಕ ಕರಣ್‌ ಗಮನ ಸೆಳೆದಿದ್ದಾರೆ.

ಈ ಸೀಸನ್‌ಅಕ್ಷಯ್ ಕುಮಾರ್, ಸಮಂತಾ ರುತ್ ಪ್ರಭು, ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ, ಆಮಿರ್ ಖಾನ್, ಕರೀನಾ ಕಪೂರ್ ಖಾನ್, ಸಾರಾ ಅಲಿ ಖಾನ್, ಆಲಿಯಾ ಭಟ್, ರಣವೀರ್ ಸಿಂಗ್, ಅಮೀರ್‌ ಖಾನ್‌ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT