ಗುರುವಾರ , ಮಾರ್ಚ್ 23, 2023
31 °C

ಡ್ರಗ್ಸ್ ಪ್ರಕರಣದಲ್ಲಿ ರಿಯಾ ಬಂಧನ: ನಟಿ ತಾಪ್ಸಿ ಪನ್ನು ಅಸಮಾಧಾನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

taapsee pannu

ಮುಂಬೈ: ಡ್ರಗ್ಸ್‌ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ಅವರನ್ನು ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಮಂಗಳವಾರ ಬಂಧಿಸಿರುವುದು ಬಾಲಿವುಡ್ ಅಂಗಳದಿಂದ ತರಹೇವಾರಿ ಪ್ರತಿಕ್ರಿಯೆಗಳ ಹುಟ್ಟಿಗೆ ಕಾರಣವಾಗಿದೆ. ಬಾಲಿವುಡ್ ನಟಿ ತಾಪ್ಸಿ ಪನ್ನು ರಿಯಾ ಬಂಧನವನ್ನು ಖಂಡಿಸಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಅಂಕಿತಾ ಲೋಖಂಡೆ ಕರ್ಮದ ಪೊಸ್ಟ್‌ನೊಂದಿಗೆ ಈ ಕ್ರಮವನ್ನು ರಹಸ್ಯವಾಗಿ ಶ್ಲಾಘಿಸಿದರೆ, ಶೇಖರ್ ಸುಮನ್ ಇದನ್ನು ‘ದೊಡ್ಡ ಗೆಲುವು’ ಎಂದು ಕೊಂಡಾಡಿದ್ದಾರೆ.

ಮತ್ತೊಂದೆಡೆ ಬಾಲಿವುಡ್ ನಟಿ ತಾಪ್ಸಿ ಪನ್ನು ಸೇರಿ ಹಲವರು ಮಾದಕವಸ್ತು ಸರಬರಾಜುದಾರರೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ರಿಯಾ ಚಕ್ರವರ್ತಿ ಬಂಧನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿ ಕುಬ್ರಾ ಸೈತ್ ಕೂಡ ರಿಯಾ ಕುಟುಂಬಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

'ಬದಲಾವಣೆ. ಅವಳು ಸೇವಿಸುತ್ತಿರಲಿಲ್ಲ. ಆದರೆ ಸುಶಾಂತ್‌ಗೆ ಹಣಕಾಸು ಮತ್ತು ಅದರ ಸಂಗ್ರಹಣೆ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಆತ ಜೀವಂತವಾಗಿದ್ದರೆ ಆತನನ್ನು ಕಂಬಿಗಳ ಹಿಂದೆ ಇಡಲಾಗುತ್ತಿತ್ತೇ? ಓಹ್ ಇಲ್ಲ. ಅವಳು ಆತನಿಗೆ ಡ್ರಗ್ಸ್‌ ಸೇವಿಸುವಂತೆ ಒತ್ತಾಯಿಸಿದ್ದಳು. ಸುಶಾಂತ್‌ ಬಲವಂತವಾಗಿ ಗಾಂಜಾ ಸೇವಿಸಿದ್ದಾನೆ. ಹೌದು ನಿಖರವಾಗಿ ಇದೇ ಆಗಿರುತ್ತದೆ. ನಾವು ಅದನ್ನು ಮಾಡಿದ್ದೇವೆ' ಎಂದು ತಾಪ್ಸಿ ಟ್ವೀಟ್ ಮಾಡಿದ್ದಾರೆ.

ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನ್ಶಿಂದೆ ರಿಯಾ ಬಂಧನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನ್ಯಾಯದ ನಗೆಪಾಟಲು. ಮಾದಕ ವ್ಯಸನಿ ಮತ್ತು ಹಲವಾರು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ, ಮುಂಬೈನ 5 ಪ್ರಮುಖ ಮನೋವೈದ್ಯರ ಆರೈಕೆಯಲ್ಲಿದ್ದ, ಅಕ್ರಮ ಔಷದಗಳ ಸೇವನೆಯಿಂದ ಆತ್ಮಹತ್ಯೆ ಮಾಡಿಕೊಂಡ  ವ್ಯಕ್ತಿಯನ್ನು ಪ್ರೀತಿಸಿದ್ದಕ್ಕಾಗಿ ಒಬ್ಬ ಮಹಿಳೆಯನ್ನು 3 ಕೇಂದ್ರೀಯ ಏಜೆನ್ಸಿಗಳು ಗುರಿಯಾಗಿಸುತ್ತಿವೆ' ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು