ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Taare Zameen Par ಚಿತ್ರದ ಬಾಲ ನಟ ಇಶಾನ್‌ ಅವಸ್ತಿ ಈಗ ಹೇಗಿದ್ದಾರೆ ನೋಡಿ..

Published 15 ಜನವರಿ 2024, 10:40 IST
Last Updated 15 ಜನವರಿ 2024, 10:40 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಸಿನಿಮಾಗಳಲ್ಲಿ ಇಂದಿಗೂ ಹಲವರ ಮೆಚ್ಚಿನ ಚಿತ್ರ ತಾರೆ ಜಮೀನ್‌ ಪರ್‌ (Taare Zameen Par). ಅಮೀರ್‌ ಖಾನ್‌ ಹಾಗೂ ಬಾಲ ನಟನಾಗಿ ದರ್ಶೀಲ್‌ ಸಫಾರಿ (ಇಶಾನ್‌ ಅವಸ್ತಿ ಪಾತ್ರದಲ್ಲಿನ ಬಾಲಕ) ಅವರ ನಟನೆ ಸಿನಿ ಪ್ರಿಯರ ಮನ ಗೆದ್ದಿತ್ತು. 2007ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. 

ಬಾಲನಟನಾಗಿ ನಟಿಸಿದ್ದ ದರ್ಶೀಲ್‌ ಅವರು ಹಲವು ವರ್ಷಗಳ ಬಳಿಕ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ಅಮೀರ್ ಖಾನ್‌ ಮಗಳು ಇರಾ ಖಾನ್‌ ಅವರ ಮದುವೆಯ ರಿಸೆಪ್ಶನ್‌ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ದರ್ಶೀಲ್‌ ಭಾಗಿಯಾಗಿದ್ದರು. 

15 ವರ್ಷದ ಬಳಿಕ ದರ್ಶೀಲ್‌ ಅವರ ಹ್ಯಾಂಡ್‌ಸಮ್‌ ಲುಕ್‌ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ದರ್ಶೀಲ್‌ ಅವರೊಂದಿಗಿನ ಫೋಟೊವನ್ನು ನಟಿ ಟಿಸ್ಕಾ ಚೋಪ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ ಹಾಗೆ ಟಿಸ್ಕಾ ಚೋಪ್ರಾ ಅವರು ತಾರೆ ಜಮೀನ್‌ ಪರ್‌ ಚಿತ್ರದಲ್ಲಿ ದರ್ಶೀಲ್‌ ಅವರ ತಾಯಿಯಾಗಿ ನಟಿಸಿದ್ದರು.

ದರ್ಶೀಲ್‌ ಅವರನ್ನು ನೋಡಿ ಹಲವರು, ‘ನೆಚ್ಚಿನ ಶಿಕ್ಷಕನ ಮಗಳ ಮದುವೆಗೆ ಶಿಷ್ಯ ಬರದೇ ಇರಲು ಹೇಗೆ ಸಾಧ್ಯ’ ಎಂದು ಕಾಮೆಂಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT