ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮನ್ನಾ ಒಪ್ಪುವರೇ?

Last Updated 10 ಮಾರ್ಚ್ 2019, 19:39 IST
ಅಕ್ಷರ ಗಾತ್ರ

ತೆಲುಗು ಚಿತ್ರರಂಗದಲ್ಲಿ ಧೂಳೆಬ್ಬಿಸುತ್ತಿರುವ ಸುಂದರಿ ತಮನ್ನಾ ಭಾಟಿಯಾ, ತೆಲುಗಿನ ಹಾರರ್ ಕಾಮಿಡಿ ‘ರಾಜು ಗಾರಿ ಗದಿ’ಯ ಮೂರನೇ ಆವೃತ್ತಿಯಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.

‘ಫನ್‌ ಆ್ಯಂಡ್‌ ಫ್ರಸ್ಟ್ರೇಷನ್‌’ (ಎಫ್‌ 2) ಬಾಕ್ಸಾಫೀಸ್ ಕೊಳ್ಳೆಹೊಡೆದ ಬಳಿಕ ತಮನ್ನಾ ತಾರಾ ವರ್ಚಸ್ಸಿನ ಜೊತೆ ಸಂಭಾವನೆಯೂ ಗಗನಮುಖಿಯಾಗಿದೆ. ‘ರಾಜು ಗಾರಿ ಗದಿ 3’ರಲ್ಲಿ ಅವರಿಗೆ ಒಂದೂವರೆ ಕೋಟಿ ರೂಪಾಯಿ ಸಂಭಾವನೆ ಕೊಡಲು ನಿರ್ದೇಶಕ ಓಂಕಾರ್‌ ಒಪ್ಪಿರುವುದಾಗಿ ಹೇಳಲಾಗುತ್ತಿದೆ. ಮೊದಲ ಆವೃತ್ತಿಯಲ್ಲಿ ಅಕ್ಕಿನೇನಿ ನಾಗಾರ್ಜುನ ಮತ್ತು ಸಮಂತಾ ನಟಿಸಿದ್ದ ಸೂಪರ್‌ ಹಿಟ್‌ ಚಿತ್ರ ಇದಾಗಿದೆ.

ಮೂರನೇ ಆವೃತ್ತಿಯ ಕಥೆಯನ್ನು ತಮನ್ನಾ ತಾರಾ ವರ್ಚಸ್ಸಿಗೆ ತಕ್ಕುದಾಗಿ ಓಂಕಾರ್‌ ಸಿದ್ಧಪಡಿಸುತ್ತಿದ್ದಾರೆ ಎಂಬುದು ಅವರ ಆಪ್ತರ ಮಾತು. ‘ದಟ್‌ ಈಸ್‌ ಮಹಾಲಕ್ಷ್ಮಿ’ ಮತ್ತು ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರಗಳಲ್ಲಿ ತಮನ್ನಾ ತೊಡಗಿಸಿಕೊಂಡಿರುವ ಕಾರಣ ದಿನಾಂಕ ಹೊಂದಾಣಿಕೆ ಮಾಡುವುದೇ ಅವರಿಗೆ ಚಿಂತೆಯಾಗಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT