ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳಿನ ಖ್ಯಾತ ನಟ, ನಿರ್ದೇಶಕ ಮಾರಿಮುತ್ತು ನಿಧನ

Published 8 ಸೆಪ್ಟೆಂಬರ್ 2023, 6:30 IST
Last Updated 8 ಸೆಪ್ಟೆಂಬರ್ 2023, 6:30 IST
ಅಕ್ಷರ ಗಾತ್ರ

ಚೆನ್ನೈ: ತಮಿಳಿನ ಖ್ಯಾತ ನಟ, ನಿರ್ದೇಶಕ ಜಿ.ಮಾರಿಮುತ್ತು (57) ಅವರು ಹೃದಯಾಘಾತದಿಂದ ಇಂದು (ಶುಕ್ರವಾರ) ಚೆನ್ನೈನಲ್ಲಿ ನಿಧನರಾದರು.

ಮಾರಿಮುತ್ತು ಅವರ ನಿಧನದ ಬಗ್ಗೆ ಚಲನಚಿತ್ರ ವಿಶ್ಲೇಷಕ ರಮೇಶ್‌ ಬಾಲಾ ಅವರು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇಂದು ಬೆಳಿಗ್ಗೆ ವಾಹಿನಿಯೊಂದರ ಧಾರಾವಾಹಿಯ ಡಬ್ಬಿಂಗ್‌ನಲ್ಲಿ ತೊಡಗಿದ್ದ ವೇಳೆ ಕುಸಿದು ಬಿದ್ದಿದ್ದರು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕುಳಿಯಲಿಲ್ಲ ಎಂದು ಜಾನ್ಸನ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

ಮಾರಿಮುತ್ತು ಅವರು ಸಿನಿಮಾ ನಿರ್ದೇಶನ, ಟಿವಿ ಧಾರಾವಾಹಿಗಳಲ್ಲಿ ನಟನೆ ಹೊರತುಪಡಿಸಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ, ನಿರ್ದೇಶಕರಾಗಿ, ನಟರಾಗಿಯೂ ಕೆಲಸ ಮಾಡಿದ್ದಾರೆ.

ಸಿನಿಮಾ ನಿರ್ದೇಶಕರಾಗುವ ಕನಸು ಹೊತ್ತ ಅವರು ತಮ್ಮ ಸ್ವಗ್ರಾಮ ಪಸುಮಲೈಥೇರಿನಿಂದ ಚೆನ್ನೈಗೆ 1990ರಲ್ಲಿ ಬಂದಿದ್ದರು. 

2008ರಲ್ಲಿ ಬಿಡುಗಡೆಯಾದ ಕಣ್ಣುಂ ಕಣ್ಣುಂ (Kannum Kannum) ಮಾರಿಮುತ್ತು ನಿರ್ದೇಶಿಸಿದ ಮೊದಲ ಚಿತ್ರವಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಸೂಪರ್‌ಸ್ಟಾರ್‌ ರಜನಿಕಾಂತ್‌ ನಟನೆಯ ‘ಜೈಲರ್‌‘ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT