ಶನಿವಾರ, ಜನವರಿ 29, 2022
17 °C

ಗೆಳೆಯ ಅಹಾನ್ ಶೆಟ್ಟಿ ಜೊತೆಗಿನ ಫೋಟೊ ಪೋಸ್ಟ್ ಮಾಡಿದ ತಾನಿಯಾ ಶ್ರಾಫ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Tania Shroff Instagram Post

ಬೆಂಗಳೂರು: ‘ತಡಪ್‘ ಚಿತ್ರದ ಮೂಲಕ ಸುನೀಲ್ ಶೆಟ್ಟಿ ಅವರ ಪುತ್ರ ಅಹಾನ್ ಶೆಟ್ಟಿ ಬಾಲಿವುಡ್ ಪ್ರವೇಶಿಸಿರುವುದು ಎಲ್ಲರಿಗೂ ತಿಳಿದಿದೆ.

ಉದ್ಯಮಿ ಜೈದೇವ್ ಮತ್ತು ರೂಮಿಲಾ ಶ್ರಾಫ್ ಪುತ್ರಿ ತಾನಿಯಾ ಶ್ರಾಫ್ ಜತೆಗೆ ಅಹಾನ್ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ.

ಗೆಳೆಯ ಅಹಾನ್ ಜತೆಗಿರುವ ಫೋಟೊಗಳನ್ನು ತಾನಿಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಹಾನ್ ಶೆಟ್ಟಿ ಕೂಡ ತಾನಿಯಾ ಜತೆಗಿರುವ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಗೆಳತಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ತಾನಿಯಾ ಪೋಸ್ಟ್‌ಗೆ ಅಹಾನ್ ಶೆಟ್ಟಿ, ‘ಐ ಲವ್ ಯೂ‘ ಎಂದು ಕಾಮೆಂಟ್ ಮಾಡಿದ್ದರೆ, ಸುನೀಲ್ ಶೆಟ್ಟಿ ಮತ್ತು ಅಹಾನ್ ಸಹೋದರಿ ಅತಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್. ರಾಹುಲ್ ಹೃದಯದ ಎಮೋಜಿಯ ಕಾಮೆಂಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು