ನವದಂಪತಿ ಹೊಸ ಮನೆಗೆ ಹೋದಾಗ ಎಂತಹ ಭಯಾನಕ ಸನ್ನಿವೇಶಗಳು ಸೃಷ್ಟಿಯಾಗುತ್ತವೆ ಎನ್ನುವುದನ್ನು ಹೇಳಲು ಹೊರಟಿದೆ ಟೆಡ್ಡಿಬೇರ್ ಚಿತ್ರ. ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆ ನಡೆಯಿತು.

ಭರತ್ ಕುಮಾರ್ ರೆಡ್ಡಿ ಮತ್ತು ನವೀನ್ ರೆಗಟ್ಟಿ ಜಂಟಿಯಾಗಿ ಆದ್ಯ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಹಾಡುಗಳ ಬಿಡುಗಡೆ ಮಾಡಿ ಮಾತನಾಡಿದ ಚಿತ್ರ ಸಾಹಿತಿ ಡಾ.ನಾಗೇಂದ್ರ ಪ್ರಸಾದ್, ‘ಕೆಲಕಾಲದ ಅಂತರದ ಬಳಿಕ ಚಿತ್ರ ಚಟುವಟಿಕೆಗಳು ಪುನರಾರಂಭಗೊಳ್ಳುತ್ತಿವೆ. ನಿರ್ಮಾಪಕರು ತಾಳ್ಮೆಯಿಂದ ಹೆಜ್ಜೆ ಇಡುವುದು ಉತ್ತಮ’ ಎಂದು ಸಲಹೆ ಮಾಡಿದರು. ಬಾ.ಮ.ಹರೀಶ್, ಉಮೇಶ್ ಬಣಕಾರ್ ಸಮಾರಂಭದಲ್ಲಿ ಇದ್ದರು.

ಮೂರು ಹಾಡುಗಳಿಗೆ ಸಂಗೀತ, ಸಾಹಿತ್ಯ ಆರೋನ್ ಕಾರ್ತಿಕ್ ಅವರದ್ದು. ಲೋಕೇಶ್ ಬಿ. ಅವರ ಕಥೆ ಹಾಗೂ ನಿರ್ದೇಶನ ಇದೆ. ಬೆಂಗಳೂರು, ಮಂಗಳೂರು ಮತ್ತು ಕುಶಾಲನಗರದಲ್ಲಿ ಚಿತ್ರೀಕರಣ ನಡೆದಿದೆ. ನಾಯಕ, ಮನಃಶಾಸ್ತ್ರಜ್ಞನಾಗಿ ಭಾರ್ಗವ್, ಕ್ರೈಂ ಪತ್ರಕರ್ತೆಯಾಗಿ ಲಿಖಿತಾ, ನಾಯಕನ ಪತ್ನಿಯಾಗಿ ಶೈಲಜಾ ಇದ್ದಾರೆ.

ನಿಖಿಲ್, ವಿಘ್ನೇಶ್, ನವೀನ್‌ಪಾಟೀಲ್, ಅಂಜಲಿ, ಅರವಿಂದ್ ತಾರಾಗಣದಲ್ಲಿದ್ದಾರೆ. ಕೃಷ್ಣಸಾರಥಿ-ನಿಖಿಲ್ ಅವರ ಛಾಯಾಗ್ರಹಣ ಇದೆ. ಸಂಕಲನ ಕುಮಾರ್– ನಾಗರಾಜ್ ಅವರದ್ದು. ಸಾಹಸ ಅಲ್ಟಿಮೇಟ್ ಶಿವು, ಚಿತ್ರಕಥೆ ನಿಖಿಲ್ ಮಂಜುಕಿರಣ್ ಬರೆದಿದ್ದಾರೆ. ಸಿರಿ ಮ್ಯೂಸಿಕ್ ಸಂಸ್ಥೆ ಈ ಆಡಿಯೋ ಹೊರತಂದಿದೆ.

ಹಾಡು ಕೇಳಲು ಲಿಂಕ್: https://www.youtube.com/watch?v=Iz-1im62ThI

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.