ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಬರ ‘ಟೆಡ್ಡಿ ಬೇರ್‘ ಟ್ರೇಲರ್ ಬಿಡುಗಡೆ

Published 23 ಜೂನ್ 2024, 18:24 IST
Last Updated 23 ಜೂನ್ 2024, 18:24 IST
ಅಕ್ಷರ ಗಾತ್ರ

ಬಹುತೇಕ ಹೊಸಬರಿಂದಲೇ ಕೂಡಿರುವ ‘ಟೆಡ್ಡಿ ಬೇರ್’ ಚಿತ್ರದ ಟ್ರೇಲರ್‌ ಇತ್ತೀಗಷ್ಟೇ ಬಿಡುಗಡೆಗೊಂಡಿದೆ. ಜನಪ್ರಿಯ ನಿರ್ದೇಶಕ ಪುರಿಜಗನ್ನಾಥ್ ಅವರ ಬಳಿ ಕೆಲಸ ಮಾಡಿದ್ದ ಲೋಕೇಶ್.ಬಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಆದ್ಯಲಕ್ಷೀ ಪ್ರೊಡಕ್ಷನ್ ಅಡಿಯಲ್ಲಿ ಜ್ಯೋತಿತಾರಕೇಶ್, ಭರತ್ ಮತ್ತು ನವೀನ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. 

‘ಈಗಾಗಲೇ ಮೂರು ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಅವೆಲ್ಲಕ್ಕಿಂತ ಮೊದಲು ಪ್ರಾರಂಭಿಸಿದ ಸಿನಿಮಾವಿದು. ಆತ್ಮ ಯಾವ ರೀತಿ ಗೊಂಬೆಯೊಳಗೆ ಸೇರಿಕೊಳ್ಳುತ್ತದೆ ಎಂಬ ಕಥೆಯನ್ನು ಹೊಂದಿದೆ. ಬೆಂಗಳೂರು, ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ’ ಎಂದರು ನಿರ್ದೇಶಕರು. 

ಭಾರ್ಗವ್ ಈ ಚಿತ್ರದ ನಾಯಕ. ಶೈಲಜಸಿಂಹ, ದೀನಪೂಜಾರಿ ನಾಯಕಿಯರು. ಇವರೊಂದಿಗೆ ಸ್ವರ್ಶರೇಖಾ, ದಿಶಾಪೂವಯ್ಯ, ಕಿಟ್ಟಿತಾಳಿಕೋಟೆ, ಮುತ್ತು ಮುಂತಾದವರು ಅಭಿನಯಿಸಿದ್ದಾರೆ.

ವಿವೇಕ್ ಜಂಗ್ಲಿ ಸಂಗೀತ, ದೀಪು-ಬೆನಕರಾಜ್ ಛಾಯಾಚಿತ್ರಗ್ರಹಣ, ಸಂತೋಷ್ ಸಂಕಲನ ಚಿತ್ರಕ್ಕಿದೆ. ಜುಲೈ ತಿಂಗಳಲ್ಲಿ ಸಿನಿಮಾವು ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT