ಗುರುವಾರ , ಸೆಪ್ಟೆಂಬರ್ 16, 2021
25 °C

ತೆಲಂಗಾಣದಿಂದ ಕೊಡಗಿಗೆ ಬಂದಿದ್ದ ಅಭಿಮಾನಿ: ಅಭಿಮಾನ ಮನೆವರೆಗೂ ಬೇಡ –ರಶ್ಮಿಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡತಿ, ಕೊಡಗಿನ ಕಣ್ಮಣಿ ನಟಿ ರಶ್ಮಿಕಾ ಮಂದಣ್ಣ ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲಿ ಸಾಕಷ್ಟು ಅಭಿಮಾನಿಗಳು ಹೊಂದಿದ್ದಾರೆ. ಬಹು ಬೇಡಿಕೆ ನಟಿಯಾಗಿರುವ ರಶ್ಮಿಕಾ ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತೀಚಿಗೆ ತೆಲಂಗಾಣ ರಾಜ್ಯದಿಂದ ಆಕಾಶ್ ತ್ರಿಪಾಠಿ ಎಂಬ ಅಭಿಮಾನಿ ರಶ್ಮಿಕಾ ಅವರನ್ನು ಹುಡುಕಿಕೊಂಡು ಕೊಡಗಿನ ವಿರಾಜಪೇಟೆಗೆ ಬಂದಿದ್ದರು. ಆದರೆ ಅಲ್ಲಿ ರಶ್ಮಿಕಾ ಸಿಗಲಿಲ್ಲ. ಕೊನೆಗೆ ಪೊಲೀಸರು ಆ ಅಭಿಮಾನಿಗೆ ಬುದ್ದಿ ಹೇಳಿ ವಾಪಸ್ಸು ಕಳುಹಿಸಿದ್ದರು.

ಇದನ್ನು ಓದಿ: ಹುಡುಕಿದ್ದು ನಟಿ ರಶ್ಮಿಕಾ ಮನೆ; ಸಿಕ್ಕಿದ್ದು ಮಂದಣ್ಣರ ತೋಟ!

ಈ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. ಇದನ್ನು ತಿಳಿದ ರಶ್ಮಿಕಾ, ಅಭಿಮಾನಿಗಳೇ ಹುಡುಕಿಕೊಂಡು ಮನೆವರೆಗೂ ಬರಬೇಡಿ ಎಂದು ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.

‘ಗೆಳೆಯರೇ ನಿಮ್ಮಲ್ಲಿ ಯಾರೋ ಒಬ್ಬರು ನನ್ನನ್ನು ಹುಡುಕಿಕೊಂಡು ತುಂಬ ದೂರ ಪ್ರಯಾಣಿಸಿ ನಮ್ಮ ಮನೆವರೆಗೂ ಹೋಗಿದ್ದೀರಿ ಎಂಬುದು ತಿಳಿಯಿತು. ದಯವಿಟ್ಟು ಹೀಗೆಲ್ಲಾ ಮಾಡಬೇಡಿ. ನಿಮ್ಮನ್ನು ಭೇಟಿ ಆಗಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ನನಗೆ ಬೇಸರವಾಗಿತ್ತಿದೆ. ನೀವು ಖಂಡಿತಾ ಒಂದು ದಿನ ಭೇಟಿ ಆಗುತ್ತೀರಿ ಎಂಬ ನಂಬಿಕೆ ನನಗಿದೆ. ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಪ್ರೀತಿ ತೋರಿಸಿ. ನಾನು ಖುಷಿಯಾಗಿರುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು