ಹೈದರಾಬಾದ್: ರಾಮ್ ಚರಣ್ ಅಭಿನಯದ 'ಗೇಮ್ ಚೇಂಜರ್' ಸಿನಿಮಾ ಟಿಕೆಟ್ ದರ ಏರಿಕೆ ಆದೇಶವನ್ನು ತೆಲಂಗಾಣ ಸರ್ಕಾರ ಶನಿವಾರ ಹಿಂಪಡೆದಿದೆ.

ಹೈಕೋರ್ಟ್ ನಿರ್ದೇಶನದಂತೆ ಆದೇಶವನ್ನು ಹಿಂಪಡೆಯಲಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಹಿತಾಸಕ್ತಿ, ಆರೋಗ್ಯ ಮತ್ತು ಭದ್ರತೆ ಕಾರಣಗಳಿಲ್ಲದಿದ್ದರೆ, ಮುಂಜಾನೆ ಪ್ರದರ್ಶನಕ್ಕೆ ಅವಕಾಶವನ್ನೂ ನಿರಾಕರಿಸಲಾಗಿದೆ.

ಟಿಕೆಟ್ ದರ ಏರಿಕೆ ಹಿಂಪಡೆದ ಕ್ರಮವು ಜನವರಿ 16ರಿಂದ ಜಾರಿಯಾಗಲಿದೆ ಎಂದು ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಜನವರಿ 10ರಿಂದ ಆರು (ಮುಂಜಾನೆ 4ರಿಂದಲೇ) ಪ್ರದರ್ಶನಗಳಿಗೆ ಅವಕಾಶ ನೀಡುವಂತೆ ಹಾಗೂ ಟಿಕೆಟ್ಗಳಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ₹ 150 ಹಾಗೂ ಏಕ ಪರದೆಯ ಚಿತ್ರ ಮಂದಿರಗಳಲ್ಲಿ ₹ 100 ಹೆಚ್ಚುವರಿ ದರ ನಿಗದಿ ಮಾಡಲು ಅನುಮತಿ ನೀಡುವಂತೆ 'ಗೇಮ್ ಚೇಂಜರ್' ಸಿನಿಮಾ ತಂಡ ಮನವಿ ಮಾಡಿತ್ತು. ಅದರಂತೆ, ರಾಜ್ಯ ಸರ್ಕಾರವು ಜನವರಿ 3ರಂದು ಅನುಮತಿ ನೀಡಿತ್ತು.

ಜನವರಿ 11ರಿಂದ 19ರ ವರೆಗೆ (9 ದಿನ) ಮಲ್ಟಿಪ್ಲೆಕ್ಸ್ಗಳಲ್ಲಿ ₹ 150 ಹಾಗೂ ಏಕ ಪರದೆಯ ಚಿತ್ರ ಮಂದಿರಗಳಲ್ಲಿ ₹ 100 ಹೆಚ್ಚುವರಿ ದರದೊಂದಿಗೆ ಐದು ಪ್ರದರ್ಶನಕ್ಕೂ ಅನುಮತಿ ನೀಡಿತ್ತು. ಇದೇ ವೇಳೆ, ಮಾದಕವಸ್ತು ಹಾಗೂ ಸೈಬರ್ ಅಪರಾಧಗಳ ನಕಾರಾತ್ಮಕ ಪರಿಣಾಮಗಳ ಕುರಿತು ಜಾಹೀರಾತು ಪ್ರದರ್ಶಿಸುವಂತೆ ಸೂಚಿಸಿತ್ತು.g

ಸಿನಿಮಾ ಜನವರಿ 10ರಂದು ತೆರೆಕಂಡಿದೆ. ಈ ಸಿನಿಮಾದಲ್ಲಿ ರಾಮ್ ಚರಣ್ಗೆ ಕಿಯಾರಾ ಅಡ್ವಾನಿ ನಾಯಕರಿಯಾಗಿದ್ದಾರೆ. ಅಂಜಲಿ, ಎಸ್.ಜೆ.ಸುರ್ಯಾಷ್, ಶ್ರೀಕಾಂತ್, ಸುನಿಲ್ ಅವರೂ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.