ಶನಿವಾರ, ಫೆಬ್ರವರಿ 27, 2021
30 °C

ತೆಲುಗಿನ ಖ್ಯಾತ ಸಿನಿಮಾ ನಿರ್ಮಾಪಕ, ವಿತರಕ ವಿ. ದೊರೆಸ್ವಾಮಿ ರಾಜು ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗಿನ ಖ್ಯಾತ ಸಿನಿಮಾ ನಿರ್ಮಾಪಕ ಹಾಗೂ ವಿತರಕ ವಿ. ದೊರೆಸ್ವಾಮಿ ರಾಜು ಇಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ಅಕ್ಕಿನೇನಿ ನಾಗೇಶ್ವರ ರಾಮ್‌, ನಾಗಾರ್ಜುನ ಅಕ್ಕಿನೇನಿ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ರಂತಹ ಖ್ಯಾತ ನಟರ ಹಿಟ್ ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದರು.

ಇವರ ಸಾವಿಗೆ ತೆಲುಗು ಸಿನಿಮಾರಂಗದ ಖ್ಯಾತ ನಟರು, ನಿರ್ಮಾಪಕರು ಹಾಗೂ ನಿರ್ದೇಶಕರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ. ನಿರ್ಮಾಪಕ ನಾಗವಂಶಿ, ನಿರ್ದೇಶಕ ಕೆ. ರಾಘವೇಂದ್ರ ರಾವ್‌, ದಿಲ್‌ರಾಜು, ಎಸ್‌.ಎಸ್‌.ರಾಜಮೌಳಿ, ನಟರಾದ ಜೂನಿಯರ್ ಎನ್‌ಟಿಆರ್‌, ನಾನಿ ಮೊದಲಾದವರು ಇವರ ಸಾವಿಗೆ ಸಂತಾಪ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

 

 

 

ವಿಎಂಸಿ ಆರ್ಗನೈಜೇಷನ್‌ ಸಂಸ್ಥೆಯ ಸ್ಥಾಪಕರಾಗಿರುವ ದೊರೆಸ್ವಾಮಿ ವಿಜಯ ಮಾರುತಿ ಕ್ರಿಯೆಷನ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ವಿಎಂಸಿ ಸಿನಿಮಾ ವಿತರಣಾ ಸಂಸ್ಥೆಯನ್ನು ಹೊಂದಿದ್ದಾರೆ.

 

ಸುಮಾರು 700ಕ್ಕೂ ಅಧಿಕ ಚಿತ್ರಗಳಿಗೆ ಅವರು ಸಿನಿಮಾ ವಿತರಕರಾಗಿದ್ದರು. ಸೀತಾರಾಮ ಗಾರಿ ಮನವರಾಲು, ಅಣ್ಣಮ್ಮಯ್ಯ, ಸಿಂಹಾದ್ರಿ, ಪ್ರೆಸಿಡೆಂಟ್ ಗಾರಿ ಪೆಲ್ಲಂ ಸೇರಿದಂತೆ ಇನ್ನೂ ಅನೇಕ ಹಿಟ್ ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು