ಬೆಂಗಳೂರು: ನಟ ರಜನಿಕಾಂತ್ ಅವರ 169ನೇ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಅಧಿಕೃತವಾಗಿ ಹೆಸರಿಡದ ಈ ಚಿತ್ರಕ್ಕೆ ‘ಥಲೈವರ್ 169’ ಎಂದು ಕರೆಯಲಾಗುತ್ತಿದೆ. ಸದ್ಯ ರಜನಿಕಾಂತ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಅನಿರುದ್ಧ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ. ಏಪ್ರಿಲ್‌ನಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗಿದೆ. 2023ರ ಸಂಕ್ರಾಂತಿ ಹಬ್ಬದ ವೇಳೆ ಚಿತ್ರ ತೆರೆಕಾಣುವ ಸಾಧ್ಯತೆ ಇದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಓದಿ... ಅಪ್ಪು ಜೊತೆಗಿನ ಕೊನೆ ಕ್ಷಣದ ವಿಡಿಯೊ ಹಂಚಿಕೊಂಡ ನಟ ಜಗ್ಗೇಶ್: ಹೇಳಿದ್ದೇನು?

ರಜನಿಕಾಂತ್ –ದಿಲೀಪ್ ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಹೊಸ ಚಿತ್ರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕೆ ನಾಯಕಿ ಯಾರು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಶೀಘ್ರವೇ ಘೋಷಣೆ ಆಗುವ ಸಾಧ್ಯತೆ ಇದೆ.

ಸದ್ಯ ದಿಲೀಪ್ ಕುಮಾರ್, ‘ಬೀಸ್ಟ್’ ಚಿತ್ರದ ಕೊನೆಯ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ಈ ಚಿತ್ರ ಏಪ್ರಿಲ್ 14ರಂದು ತೆರೆಗೆ ಬರುವ ನಿರೀಕ್ಷೆ ಇದೆ. ‘ಡಾಕ್ಟರ್’ ಚಿತ್ರ ದಿಲೀಪ್‌ಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.

ಓದಿ... ‘ಲಾಕ್ ಅಪ್’ ರಿಯಾಲಿಟಿ ಶೋ ಟೀಸರ್ ಬಿಡುಗಡೆ: ನಿರೂಪಕಿಯಾಗಿ ಕಂಗನಾ ರನೌತ್

ಓದಿ... ಪುನೀತ್ ನಿರ್ಮಾಣದ ‘ಫ್ಯಾಮಿಲಿ ಪ್ಯಾಕ್’ ಟ್ರೇಲರ್ನಲ್ಲಿ ನಗುವಿನ ಗಮ್ಮತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.