ಶನಿವಾರ, ಜುಲೈ 31, 2021
20 °C

ಟ್ರೈಲರ್‌ನಲ್ಲಿ ಭಾರೀ ಮೆಚ್ಚುಗೆ ಗಳಿಸಿದ ‘ತಲೈವಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಜಯಲಲಿತಾ ಅವರ ಜೀವನಕಥೆ ಆಧರಿಸಿದ ಚಿತ್ರ ‘ತಲೈವಿ’ಯ ತಮಿಳು, ತೆಲುಗು ಮತ್ತು ಹಿಂದಿ ಅವತರಣಿಕೆಯ ಟ್ರೈಲರ್‌ ಬಿಡುಗಡೆಯಾಗಿದೆ. ರಾಜಕೀಯ ನಾಯಕಿ ಜಯಾ ಪಾತ್ರದಲ್ಲಿ ಕಾಣಿಸಿಕೊಂಡ ಕಂಗನಾ ರನೌತ್‌ ಮಿಂಚಿದ್ದಾರೆ. ಟ್ರೈಲರ್‌ ಬಿಡುಗಡೆ ಆದ ಐದು ಗಂಟೆಗಳಲ್ಲಿ ಅದನ್ನು 3,689,858 ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದ ಫಸ್ಟ್ ಲುಕ್‌ ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆ ಆಗಿತ್ತು. ಜಯಲಲಿತಾ ಅವರ ಜೀವನಗಾಥೆ ಆದ್ದರಿಂದ ಚಿತ್ರದ ಬಗ್ಗೆ ಕುತೂಹಲವೂ ಹೆಚ್ಚಿತ್ತು. ಚಿತ್ರ ಏಪ್ರಿಲ್‌ 23ಕ್ಕೆ ಬಿಡುಗಡೆ ಆಗಲಿದೆ.

ಈ ತಲೈವಿ ಪಾತ್ರಕ್ಕಾಗಿ ಕಂಗನಾ ಅವರು 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ

ಕಂಗನಾ ರನೌತ್‌ ಜೊತೆಗೆ ಅರವಿಂದ್‌ ಸ್ವಾಮಿ, ನಾಸರ್‌, ಭಾಗ್ಯಶ್ರೀ, ಸಮುತ್ರಕನಿ, ಮಧುಬಾಲಾ ತಾರಾಗಣದಲ್ಲಿದ್ದಾರೆ. ವಿಜಯ್‌ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಷ್ಣುವರ್ಧನ್‌ ಇಂದೂರಿ ಮತ್ತು ಶೈಲೇಶ್‌ ಆರ್‌. ಸಿಂಗ್‌ ಚಿತ್ರದ ನಿರ್ಮಾಪಕರು. ಜಿ.ವಿ. ಪ್ರಕಾಶ್‌ ಅವರ ಸಂಗೀತವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು