ಶುಕ್ರವಾರ, ಆಗಸ್ಟ್ 12, 2022
21 °C

ದಾಖಲೆ ಬರೆದ ದಳಪತಿ ವಿಜಯ್‌ ‘ಮಾಸ್ಟರ್’ ಟೀಸರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ಮಾಸ್ಟರ್‌’ ಸಿನಿಮಾದ ಟೀಸರ್ ಯುಟ್ಯೂಬ್‌ನಲ್ಲಿ ದಾಖಲೆ ಬರೆದಿದೆ. ನವೆಂಬರ್ 14 ರಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡಿತ್ತು. ಈಗ ವಿಡಿಯೊವನ್ನು ಈಗಾಗಲೇ 27ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೇ 2 ಮಿಲಿಯನ್‌ಗೂ ಅಧಿಕ ಮಂದಿ ಲೈಕ್ಸ್ ನೀಡಿದ್ದಾರೆ. ಆ ಮೂಲಕ ವಿಡಿಯೊ ಹೊಸ ದಾಖಲೆ ಬರೆದಿದೆ.

ಈ ಸಿನಿಮಾಕ್ಕೆ ಎಕ್ಸ್‌ಬಿ ಕ್ರಿಯೇಷನ್ಸ್ ಸಂಸ್ಥೆ ಹಣ ಹೂಡಿಕೆ ಮಾಡಿದೆ. ಸಿನಿಮಾದಲ್ಲಿ ವಿಜಯ್ ಕಾಲೇಜ್ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ಅವರದ್ದು ಕುಡುಕನ ಪಾತ್ರವೂ ಹೌದು. ಟೀಸರ್ ನೋಡಿ ಹೇಳುವುದಾದರೆ ವಿಜಯ್ ಸೇತುಪತಿ ದಳಪತಿ ವಿಜಯ್‌ಗೆ ಎದುರಾಳಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್ ಸಿನಿಮಾವಾಗಿರುವ ಮಾಸ್ಟರ್‌ನಲ್ಲಿ ಮಾಳವಿಕ ಅವಿನಾಶ್‌, ಅರ್ಜುನ್ ದಾಸ್, ಅಂಡ್ರೆಡಾ ಜರೆಮಿಯ್ಯಾ ಹಾಗೂ ಶಾಂತನು ಭ್ಯಾಗರಾಜ್ ಮೊದಲಾದವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ನವೆಂಬರ್ 2019ರಿಂದ ಮಾಸ್ಟರ್‌ ಸಿನಿಮಾದ ಶೂಟಿಂಗ್ ಆರಂಭವಾಗಿತ್ತು. ಕಳೆದ ಏಪ್ರಿಲ್‌ನಲ್ಲಿ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಲಾಯಿತು. ಈಗ ಮತ್ತೆ ಥಿಯೇಟರ್‌ಗಳು ತೆರೆದಿದ್ದು ಚಿತ್ರತಂಡ ಮತ್ತೆ ಸಿನಿಮಾದ ಮೇಲೆ ಕೆಲಸ ಮಾಡಲು ಆರಂಭಿಸಿದೆ.

ವಿಜಯ್ ಜನಪ್ರಿಯತೆ ಹಾಗೂ ಸಿನಿಮಾದ ಮೇಲಿನ ಅಪಾರ ನಿರೀಕ್ಷೆಯಿಂದ ಸಿನಿಮಾ ಮೇಲಿನ ನಿರೀಕ್ಷೆಯೂ ಹೆಚ್ಚಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು