ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ಕಾಶ್ಮೀರ್​ ಫೈಲ್ಸ್​: ಬ್ರಿಟನ್‌ ಸಂಸತ್‌ನಿಂದ ವಿವೇಕ್‌ ಅಗ್ನಿಹೋತ್ರಿಗೆ ಆಹ್ವಾನ

Last Updated 29 ಮಾರ್ಚ್ 2022, 14:03 IST
ಅಕ್ಷರ ಗಾತ್ರ

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರಿಗೆ ಬ್ರಿಟನ್‌ ಸಂಸತ್‌ ಆಹ್ವಾನ ನೀಡಿದೆ ಎಂದು ವರದಿಯಾಗಿದೆ.

ಈ ಬಗ್ಗೆ ‘ಬಾಲಿವುಡ್‌ ಹಂಗಾಮ‘ ಸುದ್ದಿ ವಾಹಿನಿ ವರದಿ ಪ್ರಕಟಿಸಿದೆ. ಈ ಸುದ್ದಿಯನ್ನುವಿವೇಕ್‌ ಅಗ್ನಿಹೋತ್ರಿ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ರೀಟ್ವೀಟ್‌ ಮಾಡಿದ್ದಾರೆ.

‘ಪತ್ನಿ ಪಲ್ಲವಿ ಮತ್ತು ನನ್ನನ್ನು ಬ್ರಿಟನ್ ಸಂಸತ್ ಆಹ್ವಾನಿಸಿದೆ. ಮುಂದಿನ ತಿಂಗಳು ನಾವು ಬ್ರಿಟನ್‌ಗೆ ಹೋಗುತ್ತೇವೆ. ಅಲ್ಲಿಗೆ ಹೋಗುತ್ತಿರುವುದಕ್ಕೆ‘ ನಮಗೆ ಸಂತೋಷವಾಗಿದೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಗೆಲುವಿನ ಮೂಲಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಜನಪ್ರಿಯತೆ ಸಿಕ್ಕಿದೆ. ಈಗಾಗಲೇ ಈ ಸಿನಿಮಾ ₹100 ಕೋಟಿ ಕ್ಲಬ್‌ ಸೇರಿದೆ.

ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯನ್ನು ಆಧರಿಸಿ ನಿರ್ಮಾಣ ಮಾಡಿರುವ ಈ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ಮತ್ತು ಸಾರ್ವಜನಿಕರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಸಿನಿಮಾದ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ರಾಜಕಾರಣಿಗಳು ಸೇರಿದಂತೆ ಕೆಲವರು ಸಿನಿಮಾವನ್ನು ಮೆಚ್ಚಿದರೆ ಮತ್ತೆ ಹಲವರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT