ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ರಿನಾ ಜೊತೆಗಿನ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಬಣ್ಣಿಸಿದ ಸಲ್ಮಾನ್ ಖಾನ್

Published 24 ನವೆಂಬರ್ 2023, 5:50 IST
Last Updated 24 ನವೆಂಬರ್ 2023, 5:50 IST
ಅಕ್ಷರ ಗಾತ್ರ

ಮುಂಬೈ: ಖ್ಯಾತ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಬಾಲಿವುಡ್‌ನ ಆನ್‌ಸ್ಕ್ರೀನ್ ಜೋಡಿಗಳಲ್ಲಿ ಹೆಚ್ಚು ಪ್ರೀತಿಪಾತ್ರರಾಗಿದ್ದಾರೆ. ಈ ಜೋಡಿಯು 'ಮೈನೆ ಪ್ಯಾರ್ ಕ್ಯೂಂ ಕಿಯಾ', 'ಭಾರತ್', 'ಯುವರಾಜ್', 'ಪಾರ್ಟ್‌ನರ್', 'ಏಕ್ ಥಾ ಟೈಗರ್', 'ಟೈಗರ್ ಜಿಂದಾ ಹೈ' ಮತ್ತು ಇತ್ತೀಚೆಗೆ ಬಿಡುಗಡೆಯಾದ ಆಕ್ಷನ್ ಥ್ರಿಲ್ಲರ್ ಚಿತ್ರ 'ಟೈಗರ್ 3' ನಂತಹ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಕತ್ರಿನಾ ಜೊತೆಗಿನ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಎಎನ್‌ಐ ಜೊತೆ ಮಾತನಾಡಿರುವ ಸಲ್ಮಾನ್ ಖಾನ್, ನನಗೆ ಟೈಗರ್ ಮತ್ತು ಜೋಯಾ ಪಾತ್ರಗಳು ತುಂಬಾ ಇಷ್ಟವಾದವು. ನಾವು ಈ ಹಿಂದೆ ಒಟ್ಟಿಗೆ ಅಭಿನಯಿಸಿದ್ದ ಚಿತ್ರಗಳಲ್ಲಿ ಅದೇ ಕೆಮಿಸ್ಟ್ರಿ ಇರಲಿಲ್ಲ ಎಂದು ನಾನು ನಂಬುತ್ತೇನೆ. ಅಭಿಮಾನಿಗಳು ನಮ್ಮನ್ನು ತೆರೆಯ ಮೇಲೆ ಜೋಡಿಯಾಗಿ ನೋಡಲು ಇಷ್ಟಪಡುತ್ತಿದ್ದರು. ಆದರೆ, ಟೈಗರ್ ಜಿಂದಾ ಹೈ ಬರುವವರೆಗೂ ನಮ್ಮಲ್ಲಿ ಅಷ್ಟು ಕೆಮಿಸ್ಟ್ರಿ ಇರಲಿಲ್ಲ. ಅದಕ್ಕೂ ಮುನ್ನ ನಾವು 'ಯುವರಾಜ್' ಎಂಬ ಚಿತ್ರ ಮಾಡಿದ್ದೇವೆ. ಅದರಲ್ಲೂ ಅಷ್ಟು ಕೆಮಿಸ್ಟ್ರಿ ಕಾಣಲಿಲ್ಲ. ಈಗ ನಾವು ಟೈಗರ್ 3 ಮಾಡಿದ್ದೇವೆ. ಈ ಚಿತ್ರದಲ್ಲಿ ನಮ್ಮ ಪಾತ್ರಗಳನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಅಲ್ಲಿ ನೀವು ಸಲ್ಮಾನ್ ಮತ್ತು ಕತ್ರಿನಾರನ್ನು ನೋಡುವುದಿಲ್ಲ. ಟೈಗರ್ ಮತ್ತು ಜೋಯಾ ಅವರ ಕೆಮಿಸ್ಟ್ರೀ ನೋಡುತ್ತೀರಿ’ ಎಂದು ಅವರು ಹೇಳಿದ್ದಾರೆ.

ಟೈಗರ್ 3 ಬಿಡುಗಡೆಯಾದ ಕೇವಲ 10 ದಿನಗಳಲ್ಲಿ ವಿಶ್ವದಾದ್ಯಂತ ₹400 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಚಿತ್ರದಲ್ಲಿ ಶಾರುಖ್ ಖಾನ್ ಅವರು ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT