ಸೋಮವಾರ, ಆಗಸ್ಟ್ 15, 2022
27 °C

ಬಯೋಪಿಕ್‌: ಗೂಢಚಾರಿ ಬ್ಲ್ಯಾಕ್‌ ಟೈಗರ್‌ ಆಗಿ ಸಲ್ಮಾನ್‌ ಖಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೊಮ್ಯಾಂಟಿಕ್‌ ಹಾಗೂ ಆ್ಯಕ್ಷನ್ ಸಿನಿಮಾಗಳ ಮೂಲಕ ಬಾಲಿವುಡ್‌ನಲ್ಲಿ ಹವಾ ಸೃಷ್ಟಿಸಿರುವ ಬ್ಯಾಡ್‌ ಬಾಯ್‌ ಎಂದೇ ಖ್ಯಾತರಾಗಿರುವ ಸಲ್ಮಾನ್‌ ಖಾನ್‌ ಇದೀಗ ಬಯೋಪಿಕ್‌ ಸಿನಿಮಾದಲ್ಲಿ ನಟಿಸಲು ಒಪ್ಪಿಗೆಸೂಚಿಸಿದ್ದಾರೆ ಎಂದು ಬಾಲಿವುಡ್‌ನ ಅಧಿಕೃತ ಮೂಲಗಳು ತಿಳಿಸಿವೆ.

ಬಾಲಿವುಡ್‌ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದ 32 ವರ್ಷಗಳ ಬಳಿಕ ಸಲ್ಲೂ ಬಾಯ್‌ ಮೊಟ್ಟ ಮೊದಲ ಬಾರಿಗೆ ಬಯೋಪಿಕ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬ್ಲ್ಯಾಕ್‌ ಟೈಗರ್‌ ಎಂದೇ ಖ್ಯಾತರಾಗಿದ್ದ ಭಾರತದ ಗೂಢಚಾರಿ ರವೀಂದ್ರ ಕೌಶಿಕ್ ಅವರ ಬಯೋಪಿಕ್‌ ತೆರೆಗೆ ಬರಲಿದೆ. ಸಲ್ಮಾನ್‌ ಖಾನ್‌ ಅವರು ರವೀಂದ್ರ ಕೌಶಿಕ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಾಜ್‌ಕುಮಾರ್‌ ಗುಪ್ತಾ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. 70–80ರ ದಶಕದ ರೆಟ್ರೋ ಮಾದರಿಯ ಸಿನಿಮಾ ಇದಾಗಿರಲಿದೆ ಎಂದು ರಾಜ್‌ಕುಮಾರ್‌ ಗುಪ್ತಾ ತಿಳಿಸಿದ್ದಾರೆ.

ಈ ಸಿನಿಮಾಗಾಗಿ ರಾಜ್‌ಕುಮಾರ್‌ ಗುಪ್ತಾ 5 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ರವೀಂದ್ರ ಕೌಶಿಕ್ ಬಗ್ಗೆ ಅಧ್ಯಯನ ನಡೆಸಿ ಪಕ್ಕಾ ಚಿತ್ರಕತೆ ಬರೆಯಲಾಗಿದೆ ಎಂದು ಅವರು ಹೇಳಿದ್ದಾರೆ. ಇನ್ನು ಸಿನಿಮಾದ ಟೈಟಲ್‌ ಅಂತಿಮಗೊಂಡಿಲ್ಲ, ಬ್ಲ್ಯಾಕ್‌ ಟೈಗರ್‌ ಕೂಡ ಈ ಸಿನಿಮಾದ ಟೈಟಲ್ ಅಲ್ಲ ಎಂದು ರಾಜ್‌ಕುಮಾರ್‌ ಸ್ಪಷ್ಟವಾಗಿ ಹೇಳಿದ್ದಾರೆ.

ರಾಧೆ ಸಿನಿಮಾದ ಸೋಲಿನ ಬಳಿಕ ಈ ರೆಟ್ರೋ ಸಿನಿಮಾ ಸಲ್ಮಾನ್‌ ಖಾನ್‌ ಅವರ ಕೈಹಿಡಿಯುವುದೇ ಎಂಬುದನ್ನು ಕಾದು ನೋಡಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು