ಸೋಮವಾರ, ಜನವರಿ 24, 2022
29 °C

ವಿಡಿಯೊ ನೋಡಿ: ದೇವರ ಪೂಜೆಯಲ್ಲೂ ‘ಪುಷ್ಪ’ ಚಿತ್ರದ ‘ಸಾಮಿ ಸಾಮಿ’ ಹಾಡು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡತಿ  ರಶ್ಮಿಕಾ ಮಂದಣ್ಣ ನಟಿಸಿರುವ ‘ಪುಷ್ಪ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದ್ದು ಚಿತ್ರದಲ್ಲಿರುವ ‘ಸಾಮಿ ಸಾಮಿ..’ ಹಾಡು ಸಖತ್​ ಫೇಮಸ್​ ಆಗಿದೆ.

ಸ್ಟಾರ್‌ ನಟ ಅಲ್ಲು ಅರ್ಜುನ್ ನಾಯಕ ನಟರಾಗಿ ನಟಿಸಿದ್ದಾರೆ. ಇದರಲ್ಲಿ ರಶ್ಮಿಕಾ ಹೆಜ್ಜೆ ಹಾಕಿರುವ ’ಸಾಮಿ ಸಾಮಿ’ ಹಾಡು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ.  ಸದ್ಯ ಈ ಹಾಡನ್ನು ಕೇರಳದ ದೇವಾಲಯದಲ್ಲಿ ಟ್ಯೂನ್‌ ಆಗಿ ಬಳಕೆ ಮಾಡಿದ್ದಾರೆ. ಇದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಕೇರಳದ ದೇವಾಲಯದಲ್ಲಿ ಪೂಜೆಯ ಸಂದರ್ಭದಲ್ಲಿ ಅಲ್ಲಿನ ವಾದ್ಯದವರು ‘ಸಾಮಿ ಸಾಮಿ..’ ಹಾಡಿನ ಟ್ಯೂನ್​ ನುಡಿಸಿದ್ದಾರೆ. ಇದನ್ನು ಲಕ್ಷಾಂತರ ಜನರು ಸೋಶಿಯಲ್‌​ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. 

ಸಾಮಿ ಸಾಮಿ ಹಾಡು ವೈರಲ್ ಆಗುತ್ತಿರುವುದು ಹಾಗೂ ಅದರ ಟ್ಯೂನ್‌ ವಿವಿಧ ಕಡೆಗಳಲ್ಲಿ ಬಳಕೆಯಾಗುತ್ತಿರುವುದಕ್ಕೆ ಆ ಹಾಡಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಹಲವರು ಕಾಮೆಂಟ್‌ ಮಾಡುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು