ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಭೂಮಿ, ಚಲನಚಿತ್ರ ನಟ ಯೇಸು ಪ್ರಕಾಶ್ ನಿಧನ

Published 31 ಮಾರ್ಚ್ 2024, 3:24 IST
Last Updated 31 ಮಾರ್ಚ್ 2024, 3:24 IST
ಅಕ್ಷರ ಗಾತ್ರ

ಸಾಗರ: ರಂಗಭೂಮಿ, ಕಿರುತೆರೆ, ಚಲನಚಿತ್ರ ನಟ ಯೇಸುಪ್ರಕಾಶ್ (55) ಶನಿವಾರ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.

ಎರಡು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ನೀನಾಸಂ ಬಳಗ, ಕೆ.ವಿ. ಸುಬ್ಬಣ್ಣ ರಂಗಸಮೂಹ ಸೇರಿ ಹಲವು ರಂಗ ತಂಡಗಳಲ್ಲಿ ಕೆಲಸ ಮಾಡಿದ್ದರು. ಯಕ್ಷಗಾನದಲ್ಲೂ ತರಬೇತಿ ಪಡೆದು ಕೆಲವು ಪ್ರಸಂಗಗಳಿಗೆ ಬಣ್ಣ ಹಚ್ಚಿದ್ದರು. 

ಎಸ್.ನಾರಾಯಣ್ ನಿರ್ದೇಶನದ ‘ವೀರು’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದ್ದರು. ರಾಜಾಹುಲಿ, ಯಾರೇ ಕೂಗಾಡಲಿ, ಸಾರಥಿ, ಯೋಧ, ಕಲ್ಪನಾ-2 ಸೇರಿ 35ಕ್ಕೂ ಹೆಚ್ಚು ಸಿನಿಮಾ ಹಾಗೂ 100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT