ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೋತಾಪುರಿ’ ಪ್ರೋಮೊ: ಲೇಟಾಗಿ ಬಂದ್ರು ಲೇಟೆಸ್ಟಾಗಿ ಬರ್ತಿವಿ ಎಂದ ಜಗ್ಗೇಶ್

Last Updated 27 ಆಗಸ್ಟ್ 2021, 5:20 IST
ಅಕ್ಷರ ಗಾತ್ರ

ಬೆಂಗಳೂರು: ‘ಲೇಟಾಗಿ ಬಂದ್ರು ಲೇಟೆಸ್ಟಾಗಿ ಬರ್ತಿವಿ’ –ಇದು ನಟ ಜಗ್ಗೇಶ್ ‘ತೋತಾಪುರಿ’ ಚಿತ್ರದ ಟೀಸರ್​ ಪ್ರೋಮೊ ಬಿಡುಗಡೆ ಕುರಿತು ಆಡಿರುವ ಮಾತುಗಳಿವು.

ಹೌದು, ‘ನೀರ್‌ದೋಸೆ’ಯ ವಿಜಯ್‌ ಪ್ರಸಾದ್‌–ಜಗ್ಗೇಶ್‌ ಜೋಡಿ ಇದೀಗ ‘ತೋತಾಪುರಿ’ ಸಿನಿಮಾದಲ್ಲಿ ಒಂದಾಗಿದ್ದು, ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದೆ. ಸದ್ಯ ಸಿನಿಮಾದ ಟೀಸರ್​ ಪ್ರೋಮೊ ಬಿಡುಗಡೆ ಆಗಿದ್ದು, ಶೀಘ್ರವೇ ಪ್ರೇಕ್ಷಕರ ಎದುರು ಬರುವ ಮೂನ್ಸೂಚನೆಯನ್ನು ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಜಗ್ಗೇಶ್, ‘ಆತ್ಮೀಯರೆ ತೋತಾಪುರಿ ಚಿತ್ರದ ಟೀಸರ್‌ ಬಿಡುಗಡೆಗೆ ನಿರ್ದೇಶಕ ವಿಜಯ್‌ ಪ್ರಸಾದ್ ಹಾಗೂ ನಾನು ಸೇರಿ ಮುನ್ನುಡಿ ಬರೆದಿದ್ದೇವೆ. ನಗಿಸುವ ನಮ್ಮ ಕಾಯಕಕ್ಕೆ ನಿಮ್ಮ ಶುಭಹಾರೈಕೆ ಇರಲಿ’ ಎಂದು ಬರೆದುಕೊಂಡಿದ್ದಾರೆ.

ಎರಡು ಭಾಗಗಳಲ್ಲಿ ಈ ಚಿತ್ರವು ತೆರೆ ಕಾಣಲಿದ್ದು, ಲಾಕ್‌ಡೌನ್‌ಗೂ ಮುನ್ನ ಎರಡೂ ಭಾಗಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ಚಿತ್ರದಲ್ಲಿ ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT