ಭಾನುವಾರ, ಜೂನ್ 26, 2022
21 °C

ಟೈಗರ್, ದಿಶಾ ಜಾಲಿ ರೈಡ್: ಅಡ್ಡಗಟ್ಟಿದ ಮುಂಬೈ ಪೊಲೀಸರು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

Instagram/Disha Patani

ಕೋವಿಡ್‌ ಸಂಕಷ್ಟ, ಲಾಕ್‌ಡೌನ್‌ ನಡುವೆ ಬಾಂದ್ರಾದಲ್ಲಿ ಜಾಲಿ ರೈಡ್‌ ಮಾಡುತ್ತಿದ್ದ ಬಾಲಿವುಡ್‌ ನಟರಾದ ಟೈಗರ್‌ ಶ್ರಾಫ್‌ ಮತ್ತು ದಿಶಾ ಪಟಾನಿ ಅವರನ್ನು ಕಾರಿನಿಂದ ಕೆಳಗಿಳಿಸಿದ ಮುಂಬೈ ಪೊಲೀಸರು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಮಂಗಳವಾರ ಸಂಜೆ ವರ್ಕೌಟ್‌ ಮುಗಿಸಿ ಜಿಮ್‌ನಿಂದ ವಾಪಸ್‌ ಆಗುವ ವೇಳೆ ಇಬ್ಬರು ಕಾರಿನಲ್ಲಿ ಬಾಂದ್ರಾದ ರಸ್ತೆಗಳಲ್ಲಿ ಸುತ್ತಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಟೈಗರ್‌ ಶ್ರಾಫ್‌ ಹಿಂದಿನ ಸೀಟಲ್ಲಿ ಕುಳಿತಿದ್ದರು ಮತ್ತು ದಿಶಾ ಪಟಾನಿ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಎರಡನೇ ಬಾರಿಗೆ ಬಾಂದ್ರಾದ ರಸ್ತೆಯಲ್ಲಿ ಕಾರು ಕಾಣಿಸಿಕೊಂಡಾಗ ಅಡ್ಡಗಟ್ಟಿದ ಪೊಲೀಸರು ಆಧಾರ್‌ ಕಾರ್ಡ್‌ ಮತ್ತಿತರ ದಾಖಲೆಗಳನ್ನು ಪರಿಶೀಲಿಸಿ ಬಿಟ್ಟು ಕಳುಹಿಸಿದ್ದಾರೆ.

ಟೈಗರ್‌ ಮತ್ತು ದಿಶಾ ಲವ್‌ಬರ್ಡ್ಸ್‌ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಬಹಿರಂಗವಾಗೇ ತಮ್ಮ ನಡುವಣ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. ಮಾರ್ಚ್‌ನಲ್ಲಿ ಟೈಗರ್‌ ಶ್ರಾಫ್‌ ಜನ್ಮದಿನದಂದು ಖಾಸಗಿ ಡಿನ್ನರ್‌ ಕೂಟದಲ್ಲಿ ದಿಶಾ ಪಟಾನಿ ಪಾಲ್ಗೊಂಡಿದ್ದರು. ಕೃಷ್ಣ ಶ್ರಾಫ್‌ ಮತ್ತು ಅಯೆಶಾ ಶ್ರಾಫ್‌ ಜೊತೆಗೂಡಿದ್ದರು.

ಮಹಾರಾಷ್ಟ್ರದಲ್ಲಿ ಜೂನ್‌ 15ರ ವರೆಗೆ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಜನಸಾಮಾನ್ಯರು ದೈನಂದಿನ ದಿನಸಿ ಸಾಮಾನಗಳನ್ನು ತರಲು ಪರದಾಡುತ್ತಿರುವ ಸಂದರ್ಭದಲ್ಲಿ ನಟ-ನಟಿಯರು, ಸೆಲೆಬ್ರಿಟಿಗಳು ಲಂಗುಲಗಾಮಿಲ್ಲದೆ ಸುತ್ತಾಡುತ್ತಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು