ಶುಕ್ರವಾರ, ಡಿಸೆಂಬರ್ 3, 2021
20 °C

ನನ್ನ ಗಂಡ ಜಗತ್ತಿನಲ್ಲೇ ಅತ್ಯಂತ ಚೆಲುವ: ಕರೀನಾ ಕಪೂರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್​​ ನಟಿ ಕರೀನಾ ಕಪೂರ್​ ಖಾನ್​,  ನಟ ಸೈಫ್​ ಅಲಿ ಖಾನ್​​ ಇಂದು ತಮ್ಮ 9ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.

ಈ ಸಂದರ್ಭದಲ್ಲಿ ಕರೀನಾ ಕಪೂರ್​ ಖಾನ್ ಪತಿ ಸೈಫ್​ರೊಂದಿಗೆ ಇರುವ ಒಂದು ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಗ್ರೀಸ್‌ನಲ್ಲಿ ಒಟ್ಟಿಗೆ ಕಳೆದ ಸಮಯವನ್ನು ನೆನಪಿಸಿಕೊಂಡಿದ್ದಾರೆ.  

'ಗ್ರೀಸ್​ನಲ್ಲೊಂದು ಕಾಲದಲ್ಲಿ..ಒಂದು ಬೌಲ್​ ಸೂಪ್​ ಮತ್ತು ನಾವು... ಆ ಸಮಯ ನಮ್ಮ ಜೀವನವನ್ನೇ ಬದಲಿಸಿಬಿಟ್ಟಿತು...ಪ್ರಪಂಚದ ಅತ್ಯಂತ ಸುಂದರ ವ್ಯಕ್ತಿಗೆ ವಾರ್ಷಿಕೋತ್ಸವದ ಶುಭಾಶಯಗಳು' ಎಂದು ಕರೀನಾ ಕಪೂರ್‌ ಪೋಸ್ಟ್‌ ಮಾಡಿದ್ದಾರೆ.

ಈ ಪೋಸ್ಟ್‌ಗೆ ಅಭಿಮಾನಿಗಳು ಸೇರಿದಂತೆ ಬಾಲಿವುಡ್‌ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆ ಮತ್ತು ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

2008ರಲ್ಲಿ ಕರೀನಾ ಮತ್ತು ಸೈಫ್‌ ’ತಶಾನ್‌’ ಚಿತ್ರೀಕರಣಕ್ಕಾಗಿ ಗ್ರೀಸ್‌ಗೆ ತೆರಳಿದ್ದರು. ಆ ವೇಳೆ ತೆಗೆದ ಫೋಟೊವನ್ನು ಕರೀನಾ ಪೋಸ್ಟ್‌ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು