ಮುಂಬೈ: ಭಾರತೀಯ ಸಿನಿಮಾ ರಂಗದಲ್ಲಿ ಬಾಲಿವುಡ್ ಸಿನಿಮಾಗಳ ಯಶಸ್ಸಿಗೆ ಸಲೀಂ–ಜಾವೇದ್ ಅಪಾರ ಕೊಡುಗೆ ನೀಡಿದ್ದಾರೆ. ಇದೀಗ ಅವರ ಸಾಕ್ಷ್ಯಚಿತ್ರವೊಂದು ಬಾಲಿವುಡ್ ಅಂಗಳದಲ್ಲಿ ನಿರ್ಮಾಣಗೊಂಡಿದೆ.
ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಬಗೆಗಿನ ಸಾಕ್ಷ್ಯಚಿತ್ರಕ್ಕೆ ‘ಆ್ಯಂಗ್ರಿ ಯಂಗ್ ಮ್ಯಾನ್’ ಎಂದು ಹೆಸರಿಡಲಾಗಿದೆ. ಇದರಲ್ಲಿ ಹಲವು ದಿಗ್ಗಜ ನಟರ ಸಂದರ್ಶನವಿದೆ. ಅದರಲ್ಲಿ ಸ್ಯಾಂಡಲ್‌ವುಡ್ ನಟ, ರಾಕಿಂಗ್ ಸ್ಟಾರ್ ಯಶ್ ಅವರ ಸಂದರ್ಶನವನ್ನೂ ಮಾಡಲಾಗಿದೆ.
ಸದ್ಯ ಬಿಡುಗಡೆಯಾಗಿರುವ ಸಾಕ್ಷ್ಯ ಚಿತ್ರದ ಟ್ರೇಲರ್‌ನಲ್ಲಿ ಯಶ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಹೃತಿಕ್ ರೋಷನ್ ಸೇರಿದಂತೆ ಹಲವು ನಟರು ಮಾತನಾಡಿರುವ ವಿಡಿಯೊ ತುಣುಕು ಒಳಗೊಂಡಿದೆ.
‘ಇದು ಕೇವಲ ಸಂಭಾಷಣೆಯಲ್ಲ, ಅದೊಂದು ತತ್ವಶಾಸ್ತ್ರವಿದ್ದಂತೆ. ಇಂದಿಗೂ ಜನರ ಬಾಯಲ್ಲಿ ಈ ಡೈಲಾಗ್‌ಗಳು ಹರಿದಾಡುತ್ತಿವೆ’ ಎಂದು ಸಲೀಂ-ಜಾವೇದ್ ಜೋಡಿ ಕುರಿತು ಯಶ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.